www.bantwalnews.com Editor: Harish Mambady
ಬಂಟ್ವಾಳ ಅಮ್ಟಾಡಿ ಗ್ರಾಮದ ಅಜೆಕಲದಲ್ಲಿ ಸುಮಾರು 3 ಕೋ.ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಂಟ್ವಾಳ ತಾಲೂಕು ವಿಶ್ವಕರ್ಮ ಸಮಾಜ ಸೇವಾ ಸಂಘದ ‘ವಿಶ್ವಕರ್ಮ ಸಮುದಾಯ ಭವನ’ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ.
ಸುಮಾರು 22 ವರ್ಷಗಳ ಹಿಂದೆ ಕೀರ್ತಿಶೇಷ ವಿಶ್ವನಾಥ ಆಚಾರ್ಯ ಅವರು ಸಂಘಕ್ಕೆ ದಾನವಾಗಿ ನೀಡಿದ 10 ಸೆಂಟ್ಸ್ ಜಾಗಕ್ಕೆ ಹೊಂದಿಕೊಂಡು 21 ಸೆಂಟ್ಸ್ ಖರೀದಿಸಿ ಸೇರಿಸಿಕೊಂಡು ಒಟ್ಟು 31 ಸೆಂಟ್ಸ್ ನಿವೇಶನದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳುತ್ತಿದೆ. ಕಳೆದ ಫೆಬ್ರವರಿಯಲ್ಲಿ ಸಮಾಜದ ಕುಲಗುರುಗಳಾದ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ ಹಾಗೂ ಪರಮಪೂಜ್ಯ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮಿಗಳ ಆಶೀರ್ವಾದದಿಂದ ಶಿಲಾನ್ಯಾಸ ನೆರವೇರಿಸಲಾಗಿದ್ದು, ಸಂಘವು ಭವನದ ಲೋಕಾರ್ಪಣೆಗಾಗಿ ಸಮಾಜ ಬಾಂಧವರ ಆರ್ಥಿಕ ಸಹಕಾರದ ನಿರೀಕ್ಷೆಯಲ್ಲಿದೆ.
ಸಮುದಾಯ ಭವನಕ್ಕೆ ಬಿ.ರಮಾನಾಥ ರೈ ಅವರು ಸಚಿವರಾಗಿದ್ದ ವೇಳೆ ರಾಜ್ಯ ಸರಕಾರದಿಂದ 75 ಲಕ್ಷ ರೂ.ಗಳನ್ನು ಮಂಜೂರು ಮಾಡಿ ಕೊಡಿಸಿದ್ದು, ಪ್ರಸ್ತುತ ಅದು ಹಂತ ಹಂತವಾಗಿ ಸಂಘದ ಕೈ ಸೇರಿದೆ. ಜತೆಗೆ ಸಂಸದ ನಳಿನ್‌ಕುಮಾರ್ ಕಟೀಲು ಅವರ ನಿಧಿಯಿಂದ 5 ಲಕ್ಷ ರೂ.ಗಳನ್ನು ಮಂಜೂರುಗೊಂಡಿದೆ.
ಸಮುದಾಯ ಭವನಕ್ಕೆ ವಸ್ತು ಯಾ ಸಾಮಾಗ್ರಿ ರೂಪದಲ್ಲಿ ಕೊಡುಗೆ ನೀಡುವವರಿದ್ದರೆ, ಕೃತಜ್ಞತಾಪೂರ್ವಕ ಸ್ವೀಕರಿಸಿ, ದಾನಿಗಳನ್ನು ಗೌರವಿಸಲಾಗುವುದು ಎಂದು ಸಂಘ ತಿಳಿಸಿದೆ.
ಧನಸಹಾಯ ನೀಡಲು ಇಚ್ಛಿಸುವವರು ಸಿಂಡಿಕೇಟ್ ಬ್ಯಾಂಕ್ ಬಿ.ಸಿ.ರೋಡ್ ಶಾಖೆಯಲ್ಲಿನ ಚಾಲ್ತಿ ಖಾತೆ ಸಂಖ್ಯೆ 02703070000421(IFSC Code: SYNB00000270)ಕ್ಕೆ ಕಳುಹಿಸುವ ಮೂಲಕ ಹೆಚ್ಚಿನ ಮೊತ್ತದ ದೇಣಿಗೆ ನೀಡಲು ಸಂಘ ವಿನಂತಿಸಿದೆ.
ಸಂಪರ್ಕಕ್ಕಾಗಿ:
- ಸುಧಾಕರ ಆಚಾರ್ಯ 9632792726
- ಸಂದೀಪ್ ಆಚಾರ್ಯ 9742583324
- ಜಯಚಂದ್ರ ಆಚಾರ್ಯ 9743396669
Be the first to comment on "ಬಂಟ್ವಾಳದ ವಿಶ್ವಕರ್ಮ ಸಮುದಾಯ ಭವನ ಕಾಮಗಾರಿ ಪ್ರಗತಿಯಲ್ಲಿ"