ಬಿ.ಸಿ.ರೋಡಿನ ಸವಿತಾ ಸೌಹಾರ್ದ ಸಹಕಾರಿ ನಿಯಮಿತವು 2018-19ನೇ ಸಾಲಿನಲ್ಲಿ 18.90 ಕೋ.ರೂ.ವ್ಯವಹಾರ ನಡೆಸಿದ್ದು, 12.09 ಲಕ್ಷ ರೂ.ಲಾಭ ಗಳಿಸಿರುತ್ತದೆ. ಲಾಭಾಂಶದಲ್ಲಿ ಸದಸ್ಯರಿಗೆ 13 ಶೇ. ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಂಟ್ವಾಳ ತಿಳಿಸಿದರು.
ಮಂಗಳವಾರ ಬಿ.ಸಿ.ರೋಡ್ ಪದ್ಮಾ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಸಹಕಾರಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಳೆದ ಸಾಲಿನಲ್ಲಿ 3.71 ಕೋ.ರೂ.ಠೇವಣಿಗಳೊಂದಿಗೆ 3.46 ಕೋ.ರೂ.ಸಾಲ ನೀಡಿದೆ. ಸಹಕಾರಿ ಎ ಹಾಗೂ ಬಿ ದರ್ಜೆಯ ಸದಸ್ಯರು ಸೇರಿ ಒಟ್ಟು 13223 ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಕಿಶನ್ ಸರಪಾಡಿ ಅವರು ವಾರ್ಷಿಕ ವರದಿ ಮಂಡಿಸಿದರು. ಗೌರವ ಸಲಹೆಗಾರ ಉಗ್ಗಪ್ಪ ಶೆಟ್ಟಿ ಅವರು ಸಂಘದ ಬೆಳವಣಿಗೆಯಲ್ಲಿ ಸದಸ್ಯರು ಯಾವ ರೀತಿಯಲ್ಲಿ ಶ್ರಮಿಸಬೇಕಿದೆ ಎಂಬುದರ ಕುರಿತು ತಿಳಿಸಿದರು.
ಮಹಾಸಭೆಯಲ್ಲಿ ನಿರ್ದೇಶಕರಾದ ರವೀಂದ್ರ ಭಂಡಾರಿ ಕೃಷ್ಣಾಪುರ, ಮೋಹನ್ ಭಂಡಾರಿ ಪೊತಾಜೆ, ಸುರೇಂದ್ರ ಭಂಡಾರಿ ಪುತ್ತೂರು, ಭುಜಂಗ ಸಾಲಿಯಾನ್ ಬಿ.ಸಿ.ರೋಡ್, ಪದ್ಮನಾಭ ಭಂಡಾರಿ ಸುಳ್ಯ, ಎಸ್.ರವಿ ಪುಂಜಾಲಕಟ್ಟೆ, ವಸಂತ ಎಂ. ಬೆಳ್ಳೂರು, ಪ್ರಮೀಳಾ ಮಡಂತ್ಯಾರು, ಆಶಾ ಕಂದಾವರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಹಕಾರಿಯಲ್ಲಿ ಈ ಹಿಂದೆ ಸಿಇಓ ಆಗಿದ್ದ ಅನೀಶ್ ಅವರನ್ನು ಗೌರವಿಸಲಾಯಿತು. ನೂತನ ಸಿಬಂದಿ ಪ್ರಸಾದ್ ಅವರನ್ನು ಸ್ವಾಗತಿಸಲಾಯಿತು. ಆಡಳಿತ ಮಂಡಳಿಯ ನಿರ್ದೇಶಕರಾದ ಆನಂದ ಭಂಡಾರಿ ಗುಂಡದಡೆ ಸ್ವಾಗತಿಸಿ, ದಿನೇಶ್ ಎಲ್.ಬಂಗೇರ ವಂದಿಸಿದರು. ಉಪಾಧ್ಯಕ್ಷ ಸುರೇಶ್ ನಂದೊಟ್ಟು ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಸವಿತಾ ಸೌಹಾರ್ದ ಸಹಕಾರಿ ನಿಯಮಿತದಿಂದ ಶೇ.13 ಡಿವಿಡೆಂಡ್"