ಸಾರ್ವಜನಿಕರ ದಿನಬಳಕೆಯ ಮಾರ್ಗದಲ್ಲಿ ರಾತ್ರಿ ವೇಳೆ ವಿದ್ಯುದ್ದೀಪ ಉರಿಯಬೇಕಾದದ್ದು ಅಗತ್ಯ ಸೇವೆಗಳಲ್ಲಿ ಪ್ರಮುಖವಾದದ್ದು. ಇಲ್ಲಿ ಎರಡು ಉದ್ದೇಶಗಳು ಈಡೇರುತ್ತವೆ. ಮೊದಲನೆಯದ್ದು, ನಡೆದುಕೊಂಡು ಹೋಗುವವರಿಗೆ ಸರಿಯಾದ ಬೆಳಕು, ಇನ್ನೊಂದು ಕತ್ತಲಲ್ಲಿ ಅಕ್ರಮ ಎಸಗುವವರಿಗೆ ಕಡಿವಾಣ. ಆದರೆ ಬಂಟ್ವಾಳ ತಾಲೂಕಿನ ಕರೋಪಾಡಿಯ ಮಿತ್ತನಡ್ಕದಲ್ಲಿ ಕಳೆದ ಮೂರು ತಿಂಗಳಿಂದ ಹೈಮಾಸ್ಟ್ ದೀಪ ಉರಿಯದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಇದನ್ನು ಸರಿಪಡಿಸಲು ಹಲವಾರು ಬಾರಿ ಮೌಖಿಕವಾಗಿ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಕರೋಪಾಡಿ ಪಂಚಾಯತ್ ಪಿ ಡಿ ಒ ಸಹಿತ ಸಂಬಂಧಪಟ್ಟವರು ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
Be the first to comment on "ಮಿತ್ತನಡ್ಕದಲ್ಲಿ ಹೈಮಾಸ್ಟ್ ದೀಪ ಉರಿಯುವುದು ಯಾವಾಗ?"