2019-20 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಸಪ್ಟೆಂಬರ್ ತಿಂಗಳಲ್ಲಿ ಆರಂಭಗೊಳ್ಳಲಿದೆ. ಸಮೀಕ್ಷೆ ನಡೆಸುವವರಲ್ಲಿ ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಸಿಬ್ಬಂದಿ ಮತ್ತು ಆಯಾ ಗ್ರಾಮದ ಯುವಕರು ಒಳಗೊಂಡಿದ್ದು, ಮೊಬೈಲ್ ತಂತ್ರಾಂಶ ಮೂಲಕ ನಡೆಸುತ್ತಾರೆ. ಇದರ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ, ಬೆಳೆ ಪರಿಹಾರ, ಬೆಳೆ ವಿಮೆ ಇತ್ಯಾದಿಗಳು ನಿರ್ಧಾರವಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಖುದ್ದು ಹಾಜರಿದ್ದು, ಸಮೀಕ್ಷಗಾರರಿಗೆ ತೋರಿಸಬೇಕಾಗಿ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ. ಬೆಳೆ ಸಮೀಕ್ಷೆ ನಡೆಸುವವರಿಗೆ ತಮ್ಮ ಮೊಬೈಲ್ ನಂಬರ್ ಅನ್ನು ನೀಡಲು ಕೋರಿರುವ ಇಲಾಖೆ, ಈ ಕುರಿತು ಸಹಕರಿಸಲು ವಿನಂತಿಸಿದೆ.
Be the first to comment on "ಮುಂಗಾರು ಬೆಳೆ ಸಮೀಕ್ಷೆ, ಕೃಷಿ ಇಲಾಖೆ ಮನವಿ"