ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ರೋನ್ಸ್ ಬಂಟ್ವಾಳ್ ಮುಂದಾಳತ್ವದಲ್ಲಿ ಇತ್ತೀಚೆಗೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಬೆಳ್ತಂಗಡಿ ತಾಲೂಕಿನ ಜನರಿಗೆ ನೆರವು ನೀಡುವ ಕಾರ್ಯ ನಡೆಯಿತು.
ಪಾತ್ರೆ, ದಿನಸಿ, ಚಹಾ ಹುಡಿ, ಸಕ್ಕರೆ, ಅಕ್ಕಿ, ಗೋಧಿ, ಔಷಧಿ, ಬ್ರಾಂಡ್ ನ್ಯೂ ಬಟ್ಟೆ, ಚಾಪೆ, ಬ್ಲ್ಯಾಂಕೆಟ್, ಬೆಡ್ ಶೀಟುಗಳನ್ನು ಹೊತ್ತು ಕಾಲ್ನಡಿಗೆಯಲ್ಲಿ ಸಾಗಿ, ಮನೆಮನೆ ಭೇಟಿಗೈದ ತಂಡ, ಅವುಗಳನ್ನು ವಿತರಿಸಿ ಮಾನವೀಯತೆ ಮೆರೆದರು.
ಕನ್ನಡಿಗರ ಪತ್ರಕರ್ತರ ಸಂಘ, ಮಹರಾಷ್ಟ್ರದ ಅಧ್ಯಕ್ಷರಾದ ರೋನ್ಸ್ ಬಂಟ್ವಾಳ್ ಮಾರ್ಗದರ್ಶನದಲ್ಲಿ, ಪತ್ರಕರ್ತರಾದ ಆರೀಫ್ ಕಲ್ಕಟ್ಟ ನೇತೃತ್ವದಲ್ಲಿ ಶಿಕ್ಷಕ ವಿಠಲ ಅಬುರ, ಮೋಹನ್ ಕುತ್ತಾರು, ವಸಂತ ಕೋಣಾಜೆ ಅಶ್ವಿನ್ ಕುತ್ತಾರು, ಕೀರ್ತನ್ ದೇವಾಡಿಗ ಮರೋಲಿ ಸೇರಿದಂತೆ ಸ್ಥಳೀಯ ಹಲವಾರು ಸಮಾಜ ಸೇವಕರು, ಗ್ರಾಮ ಪಂಚಾಯತ್ ಸದಸ್ಯರು ಸಾಥ್ ನೀಡಿದರು.
ಉಪ್ಪಿನಂಗಡಿ, ಬೆಳ್ತಂಗಡಿ, ಚಾರ್ಮಾಡಿಗಳಿಗೆ ಭೇಟಿ ನೀಡಿದ ತಂಡ, ಅಲ್ಲಿನ ತೊಂದರೆಗೊಳಗಾದ ಪ್ರದೆಶಗಳಿಗೆ ಭೇಟಿ ನೀಡಿ ಮೂರು ದಿನ ಅಲ್ಲಿನ ಮನೆಮನೆಗಳಿಗೆ ತೆರಳಿ ನೆರವು ನೀಡಿತು.
Be the first to comment on "ಮಹಾರಾಷ್ಟ್ರ ಕನ್ನಡಿಗ ಪತ್ರಕರ್ತರ ಸಂಘದಿಂದ ನೆರೆ ಸಂತ್ರಸ್ತರಿಗೆ ನೆರವು"