ಭಾನುವಾರ ಗದ್ದೆಗೆ ಹಾಲೆರೆಯುವ ಮೂಲಕ ಸ್ಪರ್ಧೆ ಆರಂಭ…
ಕೆಸರಿನ ಓಟ, ತಪ್ಪಾಂಗಾಯಿ, ಅಡಕೆ ಹಾಳೆ ಎಳೆಯುವುದು, ಹಿಮ್ಮುಖ ಓಟ, ಕುದುರೆಗಾಡಿ ಓಟ, ಪರಮಿಡ್ ರಚನೆ, ಕುರಂಟ್ ಕಲ್ಲು, ಹಗ್ಗಜಗ್ಗಾಟ, ಕೊಡಪಾನದಲ್ಲಿ ನೀರು ತರುವುದು ಮೊದಲಾದ ಸ್ಪರ್ಧೆಗಳಿಗೆ ಉತ್ಸಾಹದ ಸ್ಪಂದನೆ.
ಇದು ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಅಮ್ಟೂರು ಘಟಕ, ಶ್ರೀ ಕೃಷ್ಣ ಭಜನಾ ಮಂದಿರ ಅಮ್ಟೂರು ಹಾಗೂ ಗ್ರಾಮ ವಿಕಾಸ ಸಮಿತಿ ಅಮ್ಟೂರು ಆಶ್ರಯದಲ್ಲಿ ನಡೆದ ಕೆಸರ್ ಪರ್ಬ ಕಂಡಡ್ ಒಂಜಿ ದಿನ ಕಾರ್ಯಕ್ರಮ.
ಅಮ್ಟೂರಿನ ಬೈದರಡ್ಕ ಪ್ರಭಾಕರ ಶೆಟ್ಟಿಯವರ ಕಂಬಳ ಗದ್ದೆ ಇಷ್ಟಕ್ಕೆಲ್ಲ ವೇದಿಕೆ.
ಮೋಹನರಾಜ ಚೌಟ ಕಾರ್ಯಕ್ರಮ ಉದ್ಘಾಟಿಸಿದರು. ಜ್ಯೋತಿಷಿ ಮನೋಜ್ ಕಟ್ಟೆಮಾರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು ಪ್ರಾಸ್ತವಿಕವಾಗಿ ಮಾತನಾಡಿ ಕೆಸರು ಗದ್ದೆಯಲ್ಲಿ ಆಟೋಟ ಸ್ಪರ್ಧೆಗಳು ನಡೆದ ಬಳಿಕ ಗದ್ದೆಯಲ್ಲಿ ಕೃಷಿ ಕಾರ್ಯ ನಡೆಸುವ ಬಗ್ಗೆಯೂ ಯುವಕರು ಚಿಂತನೆ ಹರಿಸಬೇಕು ಎಂದರು.
ಅಮ್ಟೂರು ಶ್ರೀ ಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿ ಕರಿಂಗಾಣ, ಕಲ್ಲಡ್ಕ ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಹಾಬಲ ಸಾಲ್ಯಾನ್, ಕಂಬಳ ಗದ್ದೆಯ ಮಾಲಿಕ ಪ್ರಭಾಕರ ಶೆಟ್ಟಿ, ಅಮ್ಟೂರು ಘಟಕದ ಬಜರಂಗದಳ ಸಂಚಾಲಕ ಕೌಶಿಲ್ ಶೆಟ್ಟಿ ಬಾಳಿಕೆ, ವಿಶ್ವ ಹಿಂದೂ ಪರಿಷತ್ ಅಮ್ಟೂರು ಘಟಕದ ಕಾರ್ಯದರ್ಶಿ ಜಗದೀಶ್ ಬಜಾಲ್, ಜೊತೆಕಾರ್ಯದರ್ಶಿ ಜಿತೇಶ್ ಶೆಟ್ಟಿ ಬಾಳಿಕೆ, ಅಮ್ಟೂರು ಕೃಷ್ಣ ಮಂದಿರದ ಕಾರ್ಯದರ್ಶಿ ಶ್ರೀಧರ ಸುವರ್ಣ, ಕೃಷಿಕರಾದ ಮನಮೋಹನ್ ಕಟ್ಟೆಮಾರ್, ಗಣೇಶ್ ಬೈದೆರಡ್ಕ, ಬಾಳಿಕ ಕಾಂತಪ್ಪ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮ ವಿಕಾಸ ಸಮಿತಿಯ ಕುಶಾಲಪ್ಪ ಅಮ್ಟೂರು ವಂದಿಸಿದರು. ಪಾಲ ಬಲ್ಯಾಯ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಅಮ್ಟೂರು ಕಂಬಳಗದ್ದೆಯಲ್ಲಿ ಊರವರ ಆಟೋಟ"