ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಪೆರಿಯಶಾಂತಿ ಯಿಂದ 3 ಕಿ.ಮೀ ದೂರದ ಎಂಜಿರ ಎಂಬಲ್ಲಿ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಒಂದು ಶುಕ್ರವಾರ ಮಗುಚಿಬಿದ್ದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಂಗಳೂರು- ಗುಂಡ್ಯ ಮಧ್ಯೆ ಸಂಚರಿಸುವವರಿಗೆ ಬದಲಿ ಸಂಚಾರ ವ್ಯವಸ್ಥೆ ಮಾಡಿದೆ.
ಎಂಜಿರದ ಮಲೆನಾಡು ಹೋಟೆಲ್ ಬಳಿ ಈ ಅಫಘಾತ ಇಂದು ಬೆಳಿಗ್ಗೆ 11,40 ರ ಅಂದಾಜಿಗೆ ನಡೆದಿದ್ದು, ಈ ಪ್ರದೇಶವು ಅಪಾಯಕಾರಿ ತಿರುವು ಮಾತ್ರವಲ್ಲದೆ ಹೊಂಡಗುಂಡಿಗಳಿಂದ ಕೂಡಿದ ಹೆದ್ದಾರಿಯಾಗಿ ಮಾರ್ಪಟ್ಟಿದ್ದು ಮಳೆಗಾಲದಲ್ಲಿ ನೀರು ನಿಂತು ಹೊಂಡವನ್ನು ಅಂದಾಜಿಸಲು ವಿಫಲವಾಗಿ ಅನೇಕ ಅಫಘಾತಗಳಿಗೆ ಎಡೆ ಮಾಡಿಕೊಡುವ ಸಾಧ್ಯತೆ ಇದೆ.
ರಾಷ್ಟ್ರೀಯ ಹೆದ್ದಾರಿ -75 ರಲ್ಲಿ ಘಟನೆ ನಡೆದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳಲು ಪರ್ಯಾಯ ಮಾರ್ಗವಾಗಿ ಗುಂಡ್ಯ – ಸುಬ್ರಮಣ್ಯ – ಕಡಬ – ಉಪ್ಪಿನಂಗಡಿ ಮಾರ್ಗ ಹಾಗೂ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ಉಪ್ಪಿನಂಗಡಿ – ಸುಬ್ರಮಣ್ಯ ಕ್ರಾಸ್ – ಕಡಬ – ಸುಬ್ರಮಣ್ಯ – ಗುಂಡ್ಯ ಮಾರ್ಗವನ್ನು ಬಳಸಬೇಕಾಗಿ ಪೊಲೀಸರು ಸೂಚನೆ ನೀಡಿದ್ದಾರೆ.
Be the first to comment on "ಗಮನಿಸಿ – ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ: ಬದಲಿ ಸಂಚಾರ ವ್ಯವಸ್ಥೆ"