ಅತ್ಯಧಿಕ ಮಳೆ ಬೀಳುವ ಭಾರತ ದೇಶದ ಬಹುತೇಕ ಸ್ಥಳಗಳಲ್ಲಿ ಜಲಕ್ಷಾಮ ವ್ಯಾಪಕವಾಗುತ್ತಿದ್ದು ಮಳೆ ನೀರು ಸಂರಕ್ಷಣೆ ಮಾಡುವುದೊಂದೇ ಇದಕ್ಕಿರುವ ಅಂತಿಮ ಪರಿಹಾರವೆಂದು ಉಡುಪಿಯ ಜಲತಜ್ಞ ಜೋಸೆಫ್ ರೆಬೆಲ್ಲೊ ಅಭಿಪ್ರಾಯ ಪಟ್ಟರು.
ಬಿಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜೋಡು ಮಾರ್ಗ ನೇತ್ರಾವತಿ ಜ್ಯೂನಿಯರ್ ಛೇಂಬರ್, ರೋಟರಿ ಕ್ಲಬ್ ಬಂಟ್ವಾಳ ನಗರ ಹಾಗೂ ಬಿಮೂಡ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಕಾಲೇಜಿನಲ್ಲಿ ನಡೆದ ಮಳೆನೀರು ಸಂರಕ್ಷಣೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜೇಸೀ ಅಧ್ಯಕ್ಷ ಹರ್ಷರಾಜ್ , ರೋಟರಿ ಕ್ಲಬ್ ಬಂಟ್ವಾಳ ನಗರದ ಅಧ್ಯಕ್ಕ ಜಯರಾಜ್ ಬಂಗೇರ, ಎನ್.ಎಸ್.ಎಸ್ ಯೋಜನಾಧಿಕಾರಿ ಬಾಲಕೃಷ್ಣ ನಾಯ್ಕ ಕೆ ಉಪಸ್ಥಿತರಿದ್ದರು. ಕಾಲೇಜಿನ ಪ್ರಿನ್ಸಿಪಾಲ್ ಯೂಸುಫ್ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ದಾಮೋದರ್ ಇ ಸ್ವಾಗತಿಸಿ ಅಬ್ದುಲ್ ರಝಾಕ್ ವಂದಿಸಿದರು.
Be the first to comment on "ಬಿಮೂಡ ಸರಕಾರಿ ಪಪೂ ಕಾಲೇಜಲ್ಲಿ ಜಲಜಾಗೃತಿ"