ಬಂಟ್ವಾಳ: ಸಾಮಾಜಿಕ ಸಾಮರಸ್ಯದ ಹೆಗ್ಗುರುತಾಗಿ ಗೂಡಿನಬಳಿ ಅನುದಾನಿತ ಪ್ರಾಥಮಿಕ ಶಾಲೆಯ ಸಮಗ್ರ ಅಭಿವೃದ್ಧಿಯನ್ನು ಮಾಡಿ ಮಾನವೀಯ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿರುವ ಬಿ.ರಾಮಚಂದ್ರ ರಾವ್ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದಾರೆ. ಬಹುಮುಖ ಪ್ರತಿಭೆಯಿಂದ 38 ವರ್ಷಗಳ ಸುದೀರ್ಘ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಗೂಡಿನಬಳಿ ಮಸೀದಿ ,ಹಯಾತುಲ್ ಇಸ್ಲಾಂ ಸಂಘ, ಹಯಾತುಲ್ ವಿದ್ಯಾ ಸಂಸ್ಥೆಗಳ ವತಿಯಿಂದ ಏರ್ಪಡಿಸಲಾದ ನಿವೃತ್ತ ಮುಖ್ಯಶಿಕ್ಷಕ ಬಿ.ರಾಮಚಂದ್ರ ರಾವ್ ರವರ ಶುಭ ವಿದಾಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಶುಭ ಹಾರೈಸಿದರು. ನಿವೃತ್ತರನ್ನು ವಿದ್ಯಾಸಂಸ್ಥೆಯಿಂದ ಚಿನ್ನದ ಸರ , ಉಂಗುರ ತೊಡಿಸಿ ಸನ್ಮಾನಿಸಲಾಯಿತು.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಹೆಚ್ ಖಾದರ್, ಪುರಸಭಾ ಸದಸ್ಯೆ ಝೀನತ್ ಫಿರೋಝ್, ಜಿಲ್ಲಾ ಅನುದಾನಿತ ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಕೆ.ಎಮ್.ಕೆ ಮಂಜನಾಡಿ , ಕರ್ನಾಟಕ ಅಲ್ಪಸಂಖ್ಯಾತರ ಮಾಜಿ ಅಧ್ಯಕ್ಷ ಪಿ.ಎ. ರಹೀಮ್, ಜೆಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷ ಹರ್ಷ ರಾಜ್, ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಯೂಸುಫ್, ಹಯಾತುಲ್ ಇಸ್ಲಾಂ ಆಂಗ್ಲಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ಪಾತಿಮತ್ ನೌಶೀನ, ದಾರುಲ್ ಇಸ್ಲಾಂ ಅನುದಾನಿತ ಶಾಲೆ ಅಕ್ಕರಂಗಡಿಯ ಜಿ.ಎಂ. ನೂರುದ್ದೀನ್ ಅಭಿನಂದಿಸಿ ಮಾತನಾಡಿದರು.
ಪ್ರಮುಖರಾದ ಪುರಸಭಾ ಸದಸ್ಯೆ ಸಂಶದ್ ಬಾನು, ಸುರೇಶ್ ಸಾಲ್ಯಾನ್ ಚಿಕ್ಕಯ ಮಠ, ಜಾಯ್ ಡಿಕ್ರೂಜ್ ಬಳಕ, ಕೆ. ಅಬ್ದುಲ್ ಬಶೀರ್ ಗೂಡಿನ ಬಳಿ, ಎನ್.ಎ ಅಬ್ದುಲ್ಲ, ಹಯಾತುಲ್ ಇಸ್ಲಾಂ ಅ.ಹಿ.ಪ್ರಾ.ಶಾಲೆ ಗೂಡಿನ ಬಳಿ ಸಂಚಾಲಕ ಜಿ.ಕೆ ಅಹಮ್ಮದ್ ಬಾವ, ಮುಖ್ಯೋಪಾಧ್ಯಾಯ ಸುರೇಂದ್ರ ರಾವ್ ಕೆ. , ಅಬ್ದುಲ್ ಹಮೀದ್ ಮಾಚಾರ್, ಟಿ.ಮಹಮ್ಮದ್, ಅಬ್ದುಲ್ ಸತ್ತಾರ್ , ಅಹಮ್ಮದ್ ಶಬೀರ್ ಅಝರಿ, ಅಬ್ದುಲ್ ರಶೀದ್ ಜಿ.ಕೆ. ಅಬ್ದುಲ್ ರಹಿಮಾನ್ ಮೊದಲಾದವರು ಉಪಸ್ಥಿತರಿದ್ದರು.
ಬಂಟ್ವಾಳ ಪುರಸಭೆ ಮಾಜಿ ಉಪಾಧ್ಯಕ್ಷ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿ ಪ್ರಸ್ತಾವನೆ ಗೈದರು. ಫಿರೋಝ್ ವಂದಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ನಿರೂಪಿಸಿದರು.
Be the first to comment on "ಬಹುಮುಖ ಪ್ರತಿಭೆ ಮೂಲಕ ಸಾಮಾಜಿಕ ಮನ್ನಣೆ ಪಡೆದ ರಾಮಚಂದ್ರ ರಾವ್"