ಕಲ್ಲಡ್ಕ ಜಂ-ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಇದರ ವಾರ್ಷಿಕ ಮಹಾಸಭೆಯು ಕಲ್ಲಡ್ಕದ ಮುನೀರುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ಸೋಮವಾರ ನಡೆಯಿತು.
ಮುಫತ್ತಿಷ್ ಅಬ್ದುಲ್ ಹಮೀದ್ ದಾರಿಮಿ ಕಕ್ಕಿಂಜೆ ಸಭೆಯ ಅದ್ಯಕ್ಷತೆ ವಹಿಸಿದ್ದರು. ಕಲ್ಲಡ್ಕ ಮುದರ್ರಿಸ್ ಶೇಖ್ ಮುಹಮ್ಮದ್ ಪೈಝಿ ಇರ್ಫಾನಿ, ರೇಂಜ್ ಅದ್ಯಕ್ಷರಾದ ಟಿ. ಪಿ. ಜಮಾಲುದ್ದೀನ್ ದಾರಿಮಿ, ಮುದರ್ರಿಬ್ ಮುಹಮ್ಮದ್ ಮುಸ್ಲಿಯಾರ್ ಬೆಳ್ಳಾರೆ ಮಾತನಾಡಿದರು.
ಇದೇ ವೇಳೆ ಕಳೆದ ಮೂರು ವರ್ಷಗಳಿಂದ ಕಲ್ಲಡ್ಕ ರೇಂಜ್ ಅದ್ಯಕ್ಷರಾಗಿದ್ದ ಜಮಾಲುದ್ದೀನ್ ದಾರಿಮಿ ಹಾಗೂ ಈ ವರ್ಷ ಪವಿತ್ರ ಹಜ್ ಯಾತ್ರೆ ನಿರ್ವಹಿಸಲಿರುವ ನೂತನ ಅದ್ಯಕ್ಷ ಯಹ್ಯಾ ದಾರಿಮಿ ಯವರನ್ನು ರೇಂಜ್ ವತಿಯಿಂದ ಸನ್ಮಾನಿಸಲಾಯಿತು. ಸ್ವದಖತುಲ್ಲ ಮುಸ್ಲಿಯಾರ್ ಖಿರಾಅತ್ ಪಡಿಸಿದರು. ಕಲ್ಲಡ್ಕ ರೇಂಜ್ ಪ್ರದಾನ ಕಾರ್ಯದರ್ಶಿ ಬಿ. ಟಿ. ಇಕ್ಬಾಲ್ ದಾರಿಮಿ ಸ್ವಾಗತಿಸಿ,ವಂದಿಸಿದರು.
ನೂತನ ಪದಾಧಿಕಾರಿಗಳು ಅದ್ಯಕ್ಷರಾಗಿ ಜಿ. ಎಂ. ಯಹ್ಯಾ ದಾರಿಮಿ ಗೋಳ್ತಮಜಲು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಬೂಬಕ್ಕರ್ ಸಿದ್ದೀಖ್ ಪೈಝಿ ಪಾರ್ಪಕಜೆ , ಮುಹಮ್ಮದ್ ಅಶ್ರಪ್ ಯಮಾನಿ ಬೋಳಂತೂರು.ಪ್ರಧಾನ ಕಾರ್ಯ ದರ್ಶಿಯಾಗಿ ಬಿ.ಟಿ. ಮುಹಮ್ಮದ್ ಇಕ್ಬಾಲ್ ದಾರಿಮಿ ಕಲ್ಲಡ್ಕ.ಜೊತೆ ಕಾರ್ಯದರ್ಶಿಗಳಾಗಿ ಸ್ವದಖತುಲ್ಲ ಮುಸ್ಲಿಯಾರ್ ಗೋಳ್ತಮಜಲು, ಉಸ್ಮಾನ್ ಪೈಝಿ ಗಡಿಯಾರ.
ಪರೀಕ್ಷಾ ಬೋರ್ಡ್ ಚಯರ್ಮಾನ್ ಆಗಿ ಅಹ್ಮದ್ ನಿಝಾರ್ ಮುಸ್ಲಿಯಾರ್. ವೈಸ್ ಚಯರ್ಮಾನ್ ಗಳಾಗಿ ಬಿ.ಟಿ.ಅಬ್ದುಲ್ಲ ಮುಸ್ಲಿಯಾರ್ ಕಲ್ಲಡ್ಕ, ಅಬ್ದುಲ್ ರಹ್ಮಾನ್ ದಾರಿಮಿ ಕೆ.ಸಿ.ರೋಡ್. ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಪಾರ್ಪಕಜೆ. ಎಸ್ ಕೆ ಎಸ್ ಬಿ ವಿ ಕನ್ವೀನರ್ ಆಗಿ ಅಬ್ದುಲ್ ಮಜೀದ್ ದಾರಿಮಿ ಏನಾಜೆ. ಎಸ್ ಕೆ ಎಸ್ ಬಿ ವಿ ಚಯರ್ಮಾನ್ ಮುಹಮ್ಮದ್ ಹನೀಪ್ ಮುಸ್ಲಿಯಾರ್ ಗಡಿಯಾರ. ಐ. ಟಿ. ಕೋಡಿನೇಟರ್ ಆಗಿ ಹಂಝ ಮುಸ್ಲಿಯಾರ್ ಕೆ.ಸಿ.ರೋಡ್. ಕುರುನ್ನುಗಳ್ ಡೈರೆಕ್ಟರ್ ಆಗಿ ಅಬ್ದುಲ್ ರಝಾಕ್ ಮುಸ್ಲಿಯಾರ್ ಮೊದಲಾದವರನ್ನು ಆರಿಸಲಾಯಿತು.
Be the first to comment on "ಕಲ್ಲಡ್ಕ ಜಂ-ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾಗಿ ಯಹ್ಯಾ ದಾರಿಮಿ"