ಟ್ರಾಫಿಕ್ ಪೊಲೀಸರು ಕಳೆದು ಎರಡುದಿನಗಳಿಂದ ಶಾಲಾ ಮಕ್ಕಳನ್ನು ಸಾಗಿಸುತ್ತಿರುವ ಟೆಂಪೋ, ಆಟೋರಿಕ್ಷಾಗಳ ವಿರುದ್ದ ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಆರೋಪಿಸಿ ಶನಿವಾರ ಚಾಲಕರು ದಿಢೀರ್ ಪ್ರತಿಭಟನೆಗೆ ಇಳಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಇದೇ ವೇಳೆ ಈ ರಸ್ತೆಯಲ್ಲಿ ಆಗಮಿಸುತ್ತಿದ್ದ ತಹಶೀಲ್ದಾರ್ ರಶ್ಮೀ ಎಸ್.ಆರ್. ಅವರನ್ನು ಭೇಟಿಯಾದ ಚಾಲಕರು, ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳಿಗೆ ಸಂಚಾರ ಕಾನೂನಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಪಾವತಿಸುತ್ತೆವೆ. ಆರ್.ಟಿ.ಒ.ಪ್ರಕಾರ ಟೆಂಪೋದಲ್ಲಿ 12 ಸೀಟುಗಳಿದ್ದು, 25 ಮಂದಿ ಶಾಲಾ ಮಕ್ಕಳನ್ನು ಸಾಗಿಸುತ್ತೇವೆ.
ಇಷ್ಟು ದುಬಾರಿ ತೆರಿಗೆ ಪಾವತಿಸಿ 12 ಮಕ್ಕಳ ಸಾಗಾಟ ಮಾಡಿದರೆ ನಮಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಕಾನೂನಿನಲ್ಲಿ ಅಥವಾ ಸಂಚಾರಿ ನಿಯಮದಲ್ಲಿ ತುಸು ರಿಯಾಯತಿ ನೀಡಬೇಕು ಎಂದು ಒತ್ತಾಯಿಸಿದರು.ಇದೇ ರೀತಿ ಮುಂದುವರಿದರೆ ನಾವು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂದು ಮನವರಿಕೆ ಮಾಡಿದರು.
Be the first to comment on "ಶಾಲಾ ಮಕ್ಕಳ ಸಾಗಾಟ ಚಾಲಕರ ಪ್ರತಿಭಟನೆ"