ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬಂಟ್ವಾಳ ಪುರಸಭೆ ವತಿಯಿಂದ ಪುರಸಭೆ ವ್ಯಾಪ್ತಿಯಲ್ಲಿ ಜಾಗೃತಿ ಅಭಿಯಾನ ಶುಕ್ರವಾರ ನಡೆಯಿತು.
ಹಿರಿಯ ನಾಗರಿಕ ಅಬ್ದುಲ್ ಹಮೀದ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಈ ಸಂದರ್ಭ ಉಪಸ್ಥಿತರಿದ್ದರು.
ಈ ಸಂದರ್ಭ ಬಿ.ಸಿ.ರೋಡ್ ಪೇಟೆಯಲ್ಲಿರುವ ಅಂಗಡಿ, ಹೋಟೆಲ್ ಗಳಿಗೆ ಭೇಟಿ ನೀಡಿದ ಕಿರಿಯ ಮಹಿಳಾ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು, ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ, ನಾಶ ಮಾಡುವ ಹಾಗೂ ಘನತ್ಯಾಜ್ಯ ವಿಲೇವಾರಿ ಮಾಡುವ ಕುರಿತು ಮಾಹಿತಿಯನ್ನು ನೀಡಿದರು. ಡೆಂಗೆ, ಮಲೇರಿಯಾ ಕುರಿತ ಕರಪತ್ರಗಳನ್ನು ಹಂಚಿದರಲ್ಲದೆ, ಧ್ವನಿವರ್ಧಕಗಳ ಮೂಲಕ ಜನಜಾಗೃತಿಯನ್ನು ನಡೆಸಿದರು.
Be the first to comment on "ಡೆಂಗೆ, ಮಲೇರಿಯಾ: ಬಿ.ಸಿ.ರೋಡಿನಲ್ಲಿ ಜಾಗೃತಿ"