ಬಂಟ್ವಾಳ: ಅಲೆತ್ತೂರಿನ ಮಂಗಳಾ ಫ್ರೆಂಡ್ಸ್ ಸರ್ಕಲ್ ನ 39ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಭಾಸ್ಕರ ಕುಲಾಲ್ ಪುನರಾಯ್ಕೆಗೊಂಡಿದ್ದಾರೆ.
ಅಲೆತ್ತೂರು ಪಂಜುರ್ಲಿ ದೈವದ ಮೊಕ್ತೇಸರ ನೇಮಿರಾಜ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಪುರಸಭಾ ಮಾಜಿ ಸದಸ್ಯ ಬಿ.ಮೋಹನ್, ಹಾಜರಿದ್ದರು. ಈ ಸಂದರ್ಭ, ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ನೇಮಿರಾಜ ಶೆಟ್ಟಿ ಕೊಡಂಗೆ, ಉಪಾಧ್ಯಕ್ಷರಾಗಿ ನಿತಿನ್ ಪೂಜಾರಿ ನಂದರಬೆಟ್ಟು, ಕಾರ್ಯದರ್ಶಿಯಾಗಿ ಗಿರಿಧರ ಚೆಂಡಾಡಿ, ಜೊತೆ ಕಾರ್ಯದರ್ಶಿಯಾಗಿ ಉಮೇಶ್ ಬಂಗೇರ ಕೊಡಂಗೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಶಾಂತ್ ನಂದರಬೆಟ್ಟು, ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ರೈ, ಹಾಗೂ ಶಿವರಾಜ್ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.
Be the first to comment on "ಮಂಗಳಾ ಫ್ರೆಂಡ್ಸ್ ಸರ್ಕಲ್ ಮಹಾಸಭೆ"