ಜಗತ್ತಿನಲ್ಲಿ ಎಲ್ಲರನ್ನೂ ಒಗ್ಗೂಡಿಸಬಲ್ಲ ಏಕೈಕ ಭಾಷೆ ಎಂದರೆ ಸಂಗೀತ. ಇದನ್ನು ತರಬೇತುಗೊಳಿಸುವುದರಿಂದ ಪ್ರತಿಭಾವಂತರು ಹೊರಹೊಮ್ಮುತ್ತಾರೆ ಎಂದು ಗಾಯಕಿ ರೂಪಾ ಪ್ರಕಾಶ್ ಹೇಳಿದರು.
ಮೇಲ್ಕಾರಿನ ಎಚ್.ಎಂ.ಹೈಟ್ಸ್ ವಸತಿ ಸಮುಚ್ಛಯದಲ್ಲಿ ಪುತ್ತೂರಿನ ಗುರುಕುಲ ಕಲಾಕೇಂದ್ರದ ಶಾಖೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವಜನ ಒಕ್ಕೊಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಮಾತನಾಡಿ ಗುರುಪ್ರಿಯ ಅವರು ಸಂಗೀತ ಕ್ಷೇತ್ರ, ಸಮಾಜ ಸೇವಾ ಕ್ಷೇತ್ರಗಳಲ್ಲಿ ಚಿರಪರಿಚಿತರಾಗಿದ್ದು ಅವರ ಜೀವನಕಾರ್ಯಯೋಜನೆಗಳಿಗೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ಅಧ್ಯಕ್ಷತೆ ವಹಿಸಿದ್ದ ಗುರುಕುಲ ಕಲಾಕೇಂದ್ರದ ಕಾರ್ಯದರ್ಶಿ ಶಿವಾನಂದ ಕಾಮತ್ ಮಾತನಾಡಿ ಕಲಾಕೇಂದ್ರವು ತುಳು ಜನಪದ, ಕನ್ನಡ ಜನಪದ ಕಲೆಗಳ ಉಳಿವು ಮತ್ತು ಬೆಳವಣಿಗೆಯ ನಿಟ್ಟಿನಲ್ಲಿ ಕೆಲಸ ಮಾಡುವ ಉದ್ದೇಶವನ್ನು ಹೊಂದಿದೆ ಎಂದರು. ಗಾಯಕ, ಕಲಾವಿದರಾದ ಪ್ರಕಾಶ್ ಮಹಾದೇವನ್, ಗುರುಕುಲ ಕಲಾಕೇಂದ್ರದ ಗೌರವಾಧ್ಯಕ್ಷರಾದ ವಿದ್ಯಾ ನಾಯಕ್ ಉಪಸ್ಥಿತರಿದ್ದರು.
ಕಲಾಕೇಂದ್ರದ ಸಂಚಾಲಕಿ, ಸಂಗೀತ ಶಿಕ್ಷಕಿ ಗುರುಪ್ರಿಯ ಶಿವಾನಂದ ಕಾಮತ್ ಸ್ವಾಗತಿಸಿದರು. ಶಿವಾನಂದ್ ಕಾಮತ್ ಅತಿಥಿಗಳನ್ನು ಗೌರವಿಸಿದರು. ಅಕ್ಷತಾ ನಾಯಕ್ ಪ್ರಾ ರ್ಥಿಸಿದರು.ಕಲಾಕೇಂದ್ರದ ಸದಸ್ಯೆ ದಿವ್ಯ ಪುತ್ತೂರು ವಂದಿಸಿದರು.
Be the first to comment on "ಮೇಲ್ಕಾರಿನಲ್ಲಿ ಗುರುಕುಲ ಕಲಾಕೇಂದ್ರದ ಶಾಖೆ ಉದ್ಘಾಟನೆ"