ಮಜಿ ವೀರಕಂಭ ಶಾಲೆ 8ನೇ ತರಗತಿ ಉದ್ಘಾಟನೆ

ಮಜಿ ವೀರಕಂಭದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿಯನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಉದ್ಘಾಟಿಸಿದರು.

ಉಚಿತ ಸಮವಸ್ತ್ರ, ಕಲಿಕಾ ಸಾಮಾಗ್ರಿಗಳ ವಿತರಣೆ ಹಾಗೂ ಕೊಡುಗೆಗಳ ಸ್ವೀಕಾರ ಕಾಯ೯ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಾಲೆಗೆ ಕ್ರೀಡಾ ಉಪಕರಣಗಳನ್ನು ಖರೀದಿಸಲು 5000 ಹಾಗೂ ಶಾಲೆಗೆ 2 ಕೊಠಡಿಗಳನ್ನು ನಿರ್ಮಿಸಲು ತನ್ನ ಅನುದಾನದಿಂದ ನೀಡುವುದಾಗಿಯೂ ಹಾಗೂ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಪ್ರಾರಂಭಿಸಲು ಅನುಮತಿ ಪಡೆಯಲು ಇಲಾಖಾ ಮಟ್ಟದಲ್ಲಿ ಒತ್ತಡ ತರುವುದಾಗಿ ಭರವಸೆ ನೀಡಿದರು.

ವಿಧ್ಯಾರ್ಥಿಗಳ ಕಲಿಕೆಗೆ ಹಾಗೂ ಶಾಲೆಗಳಿಗೆ ನೀಡುವ ಸಹಕಾರವು ಒಂದು ದೇವಸ್ಥಾನದ ಅಭಿವೃದ್ಧಿಗೆ ಮಾಡುವ ಸಹಾಯಕ್ಕಿಂತಲೂ ಮಿಗಿಲಾದುದು. ಶಾಲೆ ಊರಿಗೆ ಕಲಶವಿದ್ದಂತೆ ಅದರ ಉನ್ನತಿಗಾಗಿ ಸಹಕರಿಸುವುದು ಪ್ರತಿಯೊಬ್ಬ ನಾಗರೀಕನ ಕತ೯ವ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ಮಜಿ ಶಾಲಾ ಅಭಿಮಾನಿ ಬಳಗ ಹಾಗೂ ಅಭಿವೃದ್ಧಿಗಾಗಿ ಪಣ ತೊಟ್ಪಿರುವ ತಂಡವು ಉತ್ತಮವಾಗಿ ಶ್ರಮಿಸುತ್ತಿರುವುದು ಸಂತೋಷಕರ ವಿಷಯವಾಗಿದೆ ಎಂದು ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್ ಈ ಸಂದರ್ಭ ಹೇಳಿದರು.

ಮಜಿ ಶಾಲೆಯು ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಹೆಸರು ಪಡೆದಿದ್ದು ಊರಿಗೆ ಸಂತಸಕರವಾದ ವಿಷಯವಾಗಿದೆ ಗ್ರಾಮ ಪಂಚಾಯಿತಿಯ ಮಟ್ಟದಲ್ಲಿ ತಮ್ಮಿಂದ ಸಾಧ್ಯವಾಗುವ ಕೊಡುಗೆಗಳನ್ನು ನೀಡಲು ಗ್ರಾ.ಪಂ.ಯಾವಾಗಲೂ ಸಿಧ್ಧವಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಪ್ರೇಮಲತಾ ಭರವಸೆ ನೀಡಿದರು.

ಎಸ್.ಕೆ.ಪಿ.ಎ. ಬಂಟ್ವಾಳ ವಲಯವು ಕ್ಷೀರಭಾಗ್ಯಕ್ಕೆ ವಿನ್ನರ್ ನೀಡಿ ಸಹಕಾರಿಸಲು ಸಂತೋಷ ಪಡುತ್ತಿದೆ ಎಂದು ಎಸ್.ಕೆ.ಪಿ.ಎ. ಬಂಟ್ವಾಳ ವಲಯ ಸದಸ್ಯ ಜಯರಾಮ ರೈ ತಿಳಿಸಿದರು. ಶಾಲೆಯ ಏಳಿಗೆಗಾಗಿ ಶಾಲಾ ಅಭಿವೃದ್ಧಿ ಸಮಿತಿ ಶ್ರಮಿಸುತ್ತಿದೆ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಪುನರುಜ್ಜೀವನ ನೀಡುವಲ್ಲಿ ಹಲವಾರು ಜನರ ಶ್ರಮವಿದೆ. ಶಾಲೆಯ ಬಗ್ಗೆ ಅಭಿಮಾನ ಮೂಡಿದಾಗ ಮಾತ್ರ ಇಂತಹ ಕೆಲಸಗಳು ಸಾಧ್ಯ ಎಂದು ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ಅಧ್ಯಕ್ಷತೆ ವಹಿಸಿ ನುಡಿದರು.

ಶಾಲೆ ದತ್ತು ಸ್ವೀಕರಿಸಿದ್ದ ಮಾತಾ ಡೆವಲಪ್ಪರ್ಸನ ಸಂತೋಷ್ ಕುಮಾರ್ ಶೆಟ್ಟಿ ಪೂರ್ವ ಪ್ರಾಥಮಿಕ ಮಕ್ಕಳಿಗೆ ಉಚಿತ ಸಮವಸ್ತ್ರ, ಸಂದೀಪ್ ಕುಮಾರ್ ಶೆಟ್ಟಿ ಅರೆಬೆಟ್ಟು ಉಚಿತ ಊಟದ ಬಟ್ಟಲು ಹಾಗೂ ಲೋಟ, ಪ್ರಸಾದ್ ನಂದಂತಿಮಾರು ಬೆಳಗಿನ ಉಪಹಾರಕ್ಕೆ ವರ್ಷಪೂರ್ತಿ ಬಿಸ್ಕೆಟ್ , ನಾಗರಾಜ ಶಿಲ್ಪಿ ಅವರಿಂದ ಬೆಲ್ಟ್, ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಅವರಿಂದ  ಗುರುತಿನ ಚೀಟಿ, ಮಜಿ ಶಾಲೆಯ ಅಭಿಮಾನಿಗಳ ಬಳಗದ ವತಿಯಿಂದ ಬರವಣಿಗೆಯ ಪುಸ್ತಕಗಳು, ಮಾತೃಶ್ರೀ ಗೆಳೆಯರ ಬಳಗದ ವತಿಯಿಂದ ದಿನಚರಿ ಪುಸ್ತಕ , ಗುಡ್ವೀಲ್ ಪಾಣೆಮಂಗಳೂರು ಇವರಿಂದ ಕಸ ವಿಂಗಡಣಾ ಬುಟ್ಟಿಗಳು , ಕಲ್ಲಡ್ಕ ರೈತರ ಸೇವಾ ಸಹಕಾರಿ ಬ್ಯಾಂಕ್ ನಿಂದ 5 ಜೊತೆ ಹಾಗೂ ಸಮಾಜ ಸೇವಾ ಸಹಕಾರಿ ಬ್ಯಾಂಕ್ ಕಲ್ಲಡ್ಕ ವತಿಯಿಂದ 2 ಜೊತೆ ಬೆಂಚು ಡೆಸ್ಕುಗಳು , ಮುಂತಾದ ವಸ್ತುಗಳನ್ನು ಕೊಡುಗೆಗಳಾಗಿ ನೀಡಿದರು.

ಗ್ರಾಮಪಂಚಾಯತ್ ಸದಸ್ಯೆಯರಾದ ಜಯಂತಿ , ಪದ್ಮಾವತಿ , ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಮೈರ ,  ಕಾಯ೯ದಶಿ೯ ಚಿನ್ನಾ ಮೈರ, ಪ್ರಸಾದ್ ನಂದಂತಿಮಾರು, ಸಮಾಜ ಸೇವಾ ಬ್ಯಾಂಕ್ ಬಂಟ್ವಾಳ ನಿರ್ದೇಶಕ ವಿಶ್ವನಾಥ ಎಂ ಕಲ್ಲಡ್ಕ ರೈತರಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಕೊರಗಪ್ಪ ನಾಯ್ಕ , ನಾಗರಾಜ್ ಶಿಲ್ಪಿ , ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಶಾಲಾ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರು ಹಾಜರಿದ್ದರು.

ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಸ್ವಾಗತಿಸಿದರು. ಶಿಕ್ಷಕಿ ಶಕುಂತಳಾ ವಂದಿಸಿದರು. ಶಿಕ್ಷಕಿಯರಾದ ಹರಿಣಾಕ್ಷಿ ಮತ್ತು ಸಂಗೀತ ಶರ್ಮಾ ಕಾಯ೯ಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸಿಸಿಲಿಯ, ಚೈತ್ರ , ಶ್ವೇತ , ಹಾಗೂ ಜಯಲಕ್ಷ್ಮಿ, ಮೀನಾಕ್ಷಿ ಸಹಕರಿಸಿದರು.

 

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮಜಿ ವೀರಕಂಭ ಶಾಲೆ 8ನೇ ತರಗತಿ ಉದ್ಘಾಟನೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*