ಬಂಟ್ವಾಳ: ಇಲ್ಲಿನ ಬಿ.ಆರ್.ಎಂ.ಪಿ.ಸಿ.ಪಿ. ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯ ಅಂಗವಾಗಿ ವಿವಿಧ ಕಾರ್‍ಯಕ್ರಮ ನಡೆಯಿತು.
9ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಹಸನ, ಗಾಯನ, ನೃತ್ಯ ಮುಂತಾದವುಗಳ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನಗೊಳಿಸಿ, ಬಾಲಕರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕೆಂಬ ಸಂದೇಶವನ್ನು ಸಾರಿದರು.
ಶಾಲಾ ಪ್ರಿನ್ಸಿಪಾಲ್ ರಮಾಶಂಕರ್ ಸಿ., ಶಿಕ್ಷಕ-ಶಿಕ್ಷಕೇತರ ವೃಂದದವರು ಈ ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ನಮಿತಾಂಜಲಿ ಮಾರ್ಗದರ್ಶನದಲ್ಲಿ ನಡೆದ ಕಾರ್‍ಯಕ್ರಮವನ್ನು, ವಿದ್ಯಾರ್ಥಿನಿ ಸಿಂಚನಾ ಸಿ. ನಿರ್ವಹಿಸಿದರು.
Be the first to comment on "ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ"