ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕುಡಿಯುವ ನೀರಿನ ಪೂರೈಕೆ ಕಾರ್ಯಕ್ರಮಕ್ಕೆ ತಿಪಟೂರು ಯೋಜನಾ ವ್ಯಾಪ್ತಿಯ ಕಾರೇಹಳ್ಳಿ ವಲಯದ ಸಂತೆಶಿವರ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಕರ್ನಾಟಕ ರಾಜ್ಯಾದ್ಯಂತ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರತೀ ಗ್ರಾಮದ ಮನೆ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡುತಿದ್ದು ಇದರಂತೆ ಕುಡಿಯುವ ನೀರಿಗಾಗಿ ಪರದಾಡುವ ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಅಗತ್ಯಕ್ಕೆ ತಕ್ಕಂತೆ ದೈನಂದಿನ ಬಳಕೆಗೆ ಬೇಕಾಗುವ ಕನಿಷ್ಠ ನೀರಿನ ಸೌಲಭ್ಯವನ್ನು ಪಡೆದುಕೊಳ್ಳಲು ಸಮಸ್ಯೆ ಪೀಡಿತ ಗ್ರಾಮಗಳಿಗೆ ಅವಕಾಶ ಕಲ್ಪಿಸಿರುತ್ತಾರೆ.
ಕುಡಿಯುವ ನೀರು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಾಂತಾನಾಯಕ್ ರವರು ಮಾತನಾಡುತ್ತಾ ಈತ್ತೀಚಿನ ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದು ಇದರ ಪರಿಣಾಮವಾಗಿ ಹಲವೆಡೆ ಕುಡಿಯುವ ನೀರಿಗೂ ಆಹಾಕಾರ ಬಂದಿರುವುದನ್ನು ಮನಗೊಂಡು ಧರ್ಮಸ್ಥಳದ ಧರ್ಮಾಧಿಕಾರಿಯವರು ಕುಡಿಯುವ ನೀರು ಪ್ರತಿಯೋಬ್ಬರಿಗೂ ತಲುಪುವಂತೆ ಅವಕಾಶ ಕಲ್ಪಿಸಿರುತ್ತಾರೆ ಈ ನಿಟ್ಟಿನಲ್ಲಿ ನೀರಿನ ಸದ್ಬಳಕೆ ಮಾಡುವಲ್ಲಿ ನಮ್ಮ ಪಾತ್ರ ಬಹುಮುಖ್ಯವಾಗಿದೆ ಹನಿ ಹನಿ ನೀರನ್ನು ಪೊಲು ಮಾಡದೇ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಸದಸ್ಯರಾದ ವಿಜಯಕುಮಾರ್, ಪ್ರಗತಿ ಪರ ಸಾವಯವ ಕೃಷಿಕರಾದ ಬಸವರಾಜು ಸಂತಶಿವರ, ಸ್ಥಳೀಯರಾದ ಚಕ್ರಪಾನಿ ಚಿಕೋನಹಳ್ಳಿ, ವಲಯ ಒಕ್ಕೂಟದ ಅಧ್ಯಕ್ಷರಾದ ಬಸವರಾಜು ಚಿಕೋನಹಳ್ಳಿ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರಾಜೇಶ.ಎಂ.ಕಾನರ್ಪ , ಸೇವಾಪ್ರತಿನಿಧಿಯವರಾದ ಮೇಘನಾ ಹಾಗೂ ಸಂತೆಶಿವರ ಗ್ರಾಮದ ಜನರು ಪಾಲ್ಗೋಂಡಿದ್ದರು.
Be the first to comment on "ಧರ್ಮಸ್ಥಳ ಯೋಜನೆಯಿಂದ ಕುಡಿಯುವ ನೀರಿನ ನೆರವು"