ಪ್ರಜಾಪ್ರಭುತ್ವದ ಆಶಯವನ್ನು ಸಾಕ್ಷೀಕರಿಸಲು ಸಿದ್ಧಕಟ್ಟೆ ಸರಕಾರಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿ ಸಂಸತ್ ರಚನೆಯಾಯಿತು.
ಈ ಸಂದರ್ಭ ಚುನಾವಣಾ ಪ್ರಕ್ರಿಯೆಗಳು ನಡೆದವು. ಶಾಲಾ ಸಂಸತ್ತಿನ ಚುನಾವಣೆಯಲ್ಲಿ ನಾಯಕ ಸ್ಥಾನಕ್ಕೆ ೩, ಕಾರ್ಯದರ್ಶಿ ಸ್ಥಾನಕ್ಕೆ ೩ ಮತ್ತು ಕ್ರೀಡಾಕಾರ್ಯದರ್ಶಿ ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ ಕಾರಣ ಚುನಾವಣೆ ನಡೆಯಿತು. ಮತದಾನದ ಬಳಿಕ ಮತ ಎಣಿಕೆ ಪ್ರಕ್ರಿಯೆ ಕೈಗೊಳ್ಳಲಾಗಿ ಶಾಲಾ ನಾಯಕನಾಗಿ ೧೦ನೇ ತರಗತಿಯ ಪ್ರಣೀಶ್, ಉಪನಾಯಕನಾಗಿ ೯ನೇ ತರಗತಿಯ ಅಶ್ವಿನಿ.ಎ.ಡಿ, ಕಾರ್ಯದರ್ಶಿಯಾಗಿ ೯ನೇ ತರಗತಿಯ ಸ್ವಸ್ತಿಕ, ಕ್ರೀಡಾಕಾರ್ಯದರ್ಶಿಯಾಗಿ ೯ನೇ ತರಗತಿಯ ನಿರತ್ ಆಯ್ಕೆಯಾದರು. ವಿದ್ಯಾರ್ಥಿ ಸಂಸತ್ತಿನ ವಿವಿಧ ಸಚಿವರುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೃಹಮಂತ್ರಿಯಾಗಿ ಜಯಂತ್, ಅರಣ್ಯ ಮತ್ತು ಪರಿಸರ ಸಚಿವರಾಗಿ ಮಿಥುನ್‌ಚಂದ್ರ, ಶಿಕ್ಷಣ ಮತ್ತು ಶಿಸ್ತು ಮಂತ್ರಿ ಪ್ರಾಪ್ತಿ, ನೀರಾವರಿ ಮಂತ್ರಿ ಆನಂದ, ಸ್ವಚ್ಛತಾ ಮತ್ತು ನೈರ್ಮಲ್ಯ ಮಂತ್ರಿಯಾಗಿ ರಕ್ಷಿತ್, ಆರೋಗ್ಯ ಮಂತ್ರಿಯಾಗಿ ಹರ್ಷ, ವಿರೋಧ ಪಕ್ಷದ ನಾಯಕನಾಗಿ ಜಿತೇಶ್, ಸಭಾಧ್ಯಕ್ಷರಾಗಿ ಅನುಷ್ ಆಯ್ಕೆಯಾದರು. ಮಕ್ಕಳ ಹಕ್ಕು ಮತ್ತು ಮಕ್ಕಳ ಸುರಕ್ಷಾ ಸಮಿತಿಯ ಕಾರ್ಯದರ್ಶಿಯಾಗಿ ಮೋಕ್ಷ, ಭಾಷಾ ಸಂಘದ ಅಧ್ಯಕ್ಷರಾಗಿ ರಮೀಜ್, ಸಾಂಸ್ಕೃತಿಕ ಸಂಘದ ಅಧ್ಯಕ್ಷರಾಗಿ ಪೂರ್ಣಿಮಾ, ಕ್ರೀಡಾ ಸಂಘದ ಅಧ್ಯಕ್ಷರಾಗಿ ಭರತ್ ಗುರುರಾಜ್, ಇಂಟರ್‍ಯಾಕ್ಟ್ ಕ್ಲಬ್‌ನ ಅಧ್ಯಕ್ಷರಾಗಿ ಪ್ರಣೀಶ್, ಮತದಾರರ ಕ್ಲಬ್‌ನ ಅಧ್ಯಕ್ಷರಾಗಿ ಕೀರ್ತನ್, ಪ್ರೇರಣಾ ಕ್ಲಬ್‌ನ ಅಧ್ಯಕ್ಷರಾಗಿ ಸೌಮ್ಯಲತಾ ಆಯ್ಕೆಯಾದರು.
ಸಂಸತ್ತಿನ ಚುನಾವಣೆಯ ಅಧ್ಯಕ್ಷಾಧಿಕಾರಿಯಾಗಿ ಗಣಿತ ಶಿಕ್ಷಕಿ ಸುರೇಖಾ ಯು.ಎನ್. ಮತ್ತು ಮತಗಟ್ಟೆ ಅಧಿಕಾರಿಗಳಾಗಿ ಸಹಶಿಕ್ಷಕಿಯರಾದ ಸ್ಮಿತಾ, ಜೋಸ್ಲಿನ್ ಲವೀನಾ ಸಿಕ್ವೇರಾ, ಪೂರ್ಣಿಮಾ, ಅಮೀನಾ ಶೇಖ್, ಸ್ವಾತಿ ಕಾರ್ಯನಿರ್ವಹಿಸಿದರು. ಮುಖ್ಯಚುನಾವಣಾ ಅಧಿಕಾರಿಯಾಗಿ ವೈಸ್ ಪ್ರಿನ್ಸಿಲಾಲ್ ರಮಾನಂದ ನಿರ್ವಹಿಸಿದರು. ಚುನಾವಣಾ ಸಂಯೋಜಕರಾಗಿ ದೈಹಿಕ ಶಿಕ್ಷಕ ಶಿಕ್ಷಕ ವಾಸು ಎಂ. ಕಾರ್ಯನಿರ್ವಹಿಸಿದರು.
Be the first to comment on "ಸಿದ್ಧಕಟ್ಟೆ ಹೈಸ್ಕೂಲಿನಲ್ಲಿ ವಿದ್ಯಾರ್ಥಿ ಸಂಸತ್ ರಚನೆ"