ಯುವವಾಹಿನಿಯ ಬಂಟ್ವಾಳ ತಾಲೂಕು ಘಟಕವನ್ನು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು.
ಯುವವಾಹಿನಿ ಬಂಟ್ವಾಳ ಘಟಕದಅಧ್ಯಕ್ಷರಾದ ಶಿವಾನಂದ ಎಮ್ ಸಭೆಯಅಧ್ಯಕ್ಷತೆಯನ್ನು ವಹಿಸಿದ್ದರು.
ಸಮುದಾಯವು ವಿಕಾಸಮುಖಿಯಾಗಿ ಬೆಳವಣಿಗೆ ಹೊಂದಬೇಕು. ವ್ಯಕ್ತಿಯನ್ನು ಶಕ್ತಿಯನ್ನಾಗಿ ರೂಪಿಸುವ ಶಕ್ತಿ ಸಂಘಟನೆಗಿದೆ ಎಂದು ಪ್ರಧಾನ ಭಾಷಣ ಮಾಡಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಗುಣಪ್ರಸಾದ್ ಕಾರಂದೂರು ಈ ಸಂದರ್ಭ ತಿಳಿಸಿದರು.
೨೦೧೯ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೯೦ ಕ್ಕಿಂತ ಹೆಚ್ಚು ಅಂಕ ಗಳಿಸಿದ ೩೪ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಯುವವಾಹಿನಿ ಸಲಹೆಗಾರ, ತುಳುಲಿಪಿ ಶಿಕ್ಷಕ, ಸಾಹಿತಿ ಬಿ.ತಮ್ಮಯ ಅವರ ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು. ಯುವವಾಹಿನಿ ಬಂಟ್ವಾಳ ಘಟಕದ ಸನ್ಮಾನವು ತವರು ಮನೆಯ ಸನ್ಮಾನದಂತೆ ಅತ್ಯಂತ ಶ್ರೇಷ್ಠವಾದ ಸನ್ಮಾನ ಎಂದು ಅವರು ತಿಳಿಸಿದರು. ಅವರ ಪತ್ನಿ ಇಂದುಮತಿ ಈ ಸಂದರ್ಭ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ವಿಜ್ಞಾನ ಪ್ರತಿಬೆ ಕೌಶಿಕ್ ಬತ್ತನಾಡಿ ಇವರನ್ನು ಸನ್ಮಾನಿಸಲಾಯಿತು
ಯುವವಾಹಿನಿ ಕೇಂದ್ರ ಸಮಿತಿಯಅಧ್ಯಕ್ಷರಾದಜಯಂತ್ ನಡುಬೈಲು ಅವರು ಬಿ.ಇಂದಿರೇಶ್ ನೇತೃತ್ವದ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಬಂಟ್ವಾಳ ಘಟಕದ ಸಾಧನೆಯನ್ನು ಶ್ಲಾಘಿಸಿದರು.
ಎಲ್.ಐ.ಸಿ ನಿವೃತ್ತ ಅಸಿಸ್ಟೆಂಟ್ ಜನರಲ್ ಮೆನೇಜರ್ ಚಂದ್ರಕಾಂತ್ ಕುಮಾರ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖಾ ಆಯುಕ್ತರಾದ ಚರಣ್, ಉದ್ಯಮಿ ಅಜಯ್, ಬಂಟ್ವಾಳ ಎಸ್.ವಿ.ಎಸ್ ವಿದ್ಯಾಗಿರಿ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ಐತಪ್ಪ ಪೂಜಾರಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು
ಘಟಕದ ಮಾಜಿಅಧ್ಯಕ್ಷ ರಾಜೇಶ್ ಬಿ ಸ್ವಾಗತಿಸಿದರು, ಶ್ರೀಧರ ಅಮೀನ್ ಪ್ರಸ್ತಾವನೆ ಮಾಡಿದರು, ಕಾರ್ಯದರ್ಶಿ ಕಿರಣ್‌ರಾಜ್ ಪೂಂಜರೆಕೋಡಿ ೨೦೧೮-೧೯ ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು, ಗಣೇಶ್ ಪೂಂಜರೆಕೋಡಿ ಹಾಗೂ ಚೇತನ್ ಮುಂಡಾಜೆ ಸನ್ಮಾನಿತರನ್ನು ಪರಿಚಯಿಸಿದರು. ನೂತನ ಕಾರ್ಯದರ್ಶಿ ಪುರುಷೋತ್ತಮ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
Be the first to comment on "ಬಂಟ್ವಾಳ ಯುವವಾಹಿನಿ ಪದಗ್ರಹಣ, ಸಾಧಕರಿಗೆ ಸನ್ಮಾನ"