ಅಧಿಕಾರದ ಭಾವ ನಮ್ಮಲ್ಲಿರುವುದು ಬೇಡ. ಸೇವಾಭಾವ ಇರಲಿ. ಅಹಂಕಾರ ಬೇಡ. ವಿವಿಐಪಿ ಸಂಸ್ಕೃತಿಯಲ್ಲಿರಬೇಡಿ. ಜನರೊಂದಿಗೆ ಬೆರೆಯಿರಿ. ಯಾವಾಗ ನಾವು ಸೇವಾಭಾವದಲ್ಲಿ ಕೆಲಸ ಮಾಡುತ್ತೇವೋ ಅಲ್ಲಿವರೆಗೆ ಜನರು ನಮ್ಮೊಂದಿಗಿರುತ್ತಾರೆ.
ಯಾವತ್ತೂ ಅಹಂಕಾರ ಪಡದಿರಿ. ಅಹಂಕಾರವನ್ನು ಎಷ್ಟು ದೂರ ಇಡುತ್ತೇವೋ ಅಷ್ಟು ನಮಗೆ ಒಳ್ಳೆಯದು. ಕೆಲವರು ನಿಮ್ಮನ್ನು ದಾರಿ ತಪ್ಪಿಸಲು ಯತ್ನಿಸುತ್ತಾರೆ. ಅದಕ್ಕೆ ಎಂದಿಗೂ ತಲೆಬಾಗಬೇಡಿ. ನಾವು ಎಷ್ಟೇ ಬೆಳದರೂ ನಮ್ಮ ಬೇರುಗಳನ್ನು ಯಾವತ್ತೂ ಮರೆಯಬಾರದು. ಸಂಸದರಾದ ನೀವು ಕೂಡ ಎಚ್ಚರಿಕೆಯಿಂದ ಹೇಳಿಕೆಗಳನ್ನು ನೀಡಬೇಕು. ಜನರ ಅಭಿವೃದ್ಧಿಗಾಗಿ ನಿರಂತರ ಶ್ರಮ ವಹಿಸಿ.
ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಬಿಜೆಪಿ ಸಂಸದೀಯ ನಾಯಕರಾಗಿ ಆಯ್ಕೆಯಾದ ನಂತರ ಪಕ್ಷದ ನೂತನ ಸಂಸದರನ್ನು ಉದ್ದೇಶಿಸಿ ಎರಡನೇ ಬಾರಿ ಪ್ರಧಾನಿಯಾಗುತ್ತಿರುವ ನರೇಂದ್ರ ಮೋದಿ ಸಂಸದರಿಗೆ ಕೆಲವು ಟಿಪ್ಸ್ ನೀಡಿದ್ದು ಹೀಗೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎಗೆ 353 ಸ್ಥಾನ ಕೊಟ್ಟಿರುವ ಜನ ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದ ಅವರು, ಇದು ನಮ್ಮ ಮೇಲಿನ ಜವಾಬ್ದಾರಿಯ ಹೊರೆಯನ್ನು ಹೆಚ್ಚಿಸುತ್ತದೆ. ಈ ವಿಶ್ವಾಸವನ್ನು ನಾವು ಉಳಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
Be the first to comment on "ಅಹಂ ಬೇಡ, ಜನರೊಂದಿಗೆ ಬೆರೆತು ಕೆಲಸ ಮಾಡಿ – ಸಂಸದರಿಗೆ ಮೋದಿ ಕಿವಿಮಾತು"