ಕಾಂಗ್ರೆಸ್ ನಲ್ಲಿ ಸೋನಿಯಾ ಮಾತ್ರ ಮುನ್ನಡೆ, ರಾಹುಲ್ ಗಾಂಧಿಯೂ ಹಿನ್ನಡೆ
ಲೋಕಸಭೆ ಚುನಾವಣೆ 2019ರ ಕೇಂದ್ರಬಿಂದುವಾಗಿರುವ ಉತ್ತರ ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಭಾರೀ ಮುನ್ನಡೆ ಸಾಧಿಸಿದ್ದು, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಗಳನ್ನು ಹಿಂದಿಕ್ಕಿ ಧಾಪುಗಾಲು ಹಾಕಿದೆ.
80 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಬೆಳಿಗ್ಗೆ 9.50ರ ಹೊತ್ತಿಗೆ 53 ಕ್ಷೇತ್ರಗಳಲ್ಲಿ ಮುಂದಿದ್ದು, ಬಹುಜನ ಸಮಾಜ ಪಕ್ಷ 11ರಲ್ಲಿ ಮತ್ತು ಸಮಾಜವಾದಿ ಪಕ್ಷ 8ರಲ್ಲಿ ಮುನ್ನಡೆ ಕಂಡಿವೆ. ಕಾಂಗ್ರೆಸ್ ಕೇವಲ 1 ಕ್ಷೇತ್ರದಲ್ಲಿ ಮುನ್ನಡೆ ಕಂಡಿದೆ. ಅದು ಸೋನಿಯಾ ಗಾಂಧಿ ಪ್ರತಿನಿಧಿಸಿರುವ ರಾಯ್ ಬರೇಲಿ ಲೋಕಸಭಾ ಕ್ಷೇತ್ರ. ವಿಶೇಷವೆಂದರೆ ಕಾಂಗ್ರೆಸ್ ನ ಪ್ರಧಾನಿ ಅಭ್ಯರ್ಥಿ ಎಂದೇ ಹೇಳಲಾದ ರಾಹುಲ್ ಗಾಂಧಿ ಅವರೂ ಹಿಂದಿದ್ದಾರೆ. ಸ್ಮೃತಿ ಇರಾನಿ ಅಮೇಠಿ ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ 2014ರ ಚುನಾವಣೆಯಲ್ಲಿ ಬಿಜೆಪಿ 71ರಲ್ಲಿ ಗೆದ್ದು ವಿರೋಧಿಗಳಿಗೆ ಭಾರೀ ತಿರುಗೇಟು ನೀಡಿತ್ತು. ಸಮಾಜವಾದಿ ಪಕ್ಷ ಕೇವಲ 5ರಲ್ಲಿ ಮತ್ತು ಕಾಂಗ್ರೆಸ್ 2ರಲ್ಲಿ ಗೆದ್ದಿದ್ದವು. ಆದರೆ, ಬಹುಜನ ಸಮಾಜ ಪಕ್ಷ ಒಂದೂ ಸೀಟನ್ನು ಗೆದ್ದಿರಲಿಲ್ಲ.
ರಾಹುಲ್ ಗಾಂಧಿ ಅವರು ವಯನಾಡ್ ನಲ್ಲಿ ಮುಂದಿದ್ದಾರೆ. ಸೋಲಿನ ಭೀತಿಯಲ್ಲಿಯೇ ಅವರು ವಯನಾಡಿನಲ್ಲಿ ಸ್ಪರ್ಧೆಗಿಳಿದಿದ್ದರು ಎಂದು ಸ್ಮೃತಿ ಇರಾನಿ ಲೇವಡಿ ಮಾಡಿದ್ದರು.
Be the first to comment on "ಉತ್ತರ ಪ್ರದೇಶದಲ್ಲಿ ಬಿಜೆಪಿ ಕಮಾಲ್ – 53 ಕ್ಷೇತ್ರಗಳಲ್ಲಿ ಮುನ್ನಡೆ"