11.10 AM TRENDING ಲಕ್ಷ ದಾಟಿದ ನಳಿನ್, ಅನಂತ್ ಹೆಗಡೆ ಅಂತರ
ಕರಾವಳಿ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರದಲ್ಲೂ 2014ರ ಫಲಿತಾಂಶ ಮರುಕಳಿಸುವ ಸಾಧ್ಯತೆ ಇದೆ. ಶೋಭಾ ಕರಂದ್ಲಾಜೆ (ಉಡುಪಿ) ಅನಂತ ಕುಮಾರ್ ಹೆಗಡೆ (ಉತ್ತರ ಕನ್ನಡ) ಮತ್ತು ನಳಿನ್ ಕುಮಾರ್ ಕಟೀಲ್ (ದಕ್ಷಿಣ ಕನ್ನಡ) ಮತ್ತೆ ಲೋಕಸಭೆ ಪ್ರವೇಶಿಸುವ ಸಾಧ್ಯತೆ ನಿಚ್ಚಳವಾಗಿದೆ. ಏಕೆಂದರೆ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಅವರು ಭಾರೀ ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದ್ದಾರೆ. ಫಲಿತಾಂಶ ಘೋಷಣೆಯಾಗುವುದೇ ಬಾಕಿ.
11 ಗಂಟೆ ವೇಳೆಗೆ ಶೋಭಾ ಕರಂದ್ಲಾಜೆ 1,16,736 ಮತಗಳನ್ನು ಗಳಿಸಿದ್ದರೆ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಪ್ರಮೋದ್ ಮಧ್ವರಾಜ್ 54,591 ಮತ ಗಳಿಸಿದ್ದರು. ಅದೇ ವೇಳೆಗೆ ಅನಂತ ಕುಮಾರ್ ಹೆಗಡೆ 3,30,330 ಮತ ಗಳಿಸಿದ್ದರೆ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ನ ಆನಂದ ಆಸ್ನೋಟಿಕರ್ 1,16,085 ಓಟು ಗಳಿಸಿದ್ದರು. ದಕ್ಷಿಣ ಕನ್ನಡ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 3,02,627 ಮತ ಗಳಿಸಿದರೆ, ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಮಿಥುನ್ ರೈ 1,85,832 ಮತ ಗಳಿಸಿದ್ದರು.
Be the first to comment on "ಕರಾವಳಿಯಲ್ಲಿ ಬಿಜೆಪಿ ಹವಾ – ಕಟೀಲ್, ಶೋಭಾ, ಅನಂತ್ ಮತ್ತೆ ಲೋಕಸಭೆಗೆ"