
ತ್ಯಾಜ್ಯದ ಬಾಟಲಿ ಹೀಗಾಯ್ತು ನೋಡಿ
ನದಿ, ಸಾಗರ ಕಿನಾರೆಗಳಲ್ಲಿ ತ್ಯಾಜ್ಯ ಗಳೆಂದು ಎಸೆದ ಬಾಟಲ್ ಗಳಿಗೆ ಕಲಾತ್ಮಕ ಸ್ಪರ್ಶ ನೀಡಿ ಮನೆಯಲ್ಲಿ ಕಲಾಕೃತಿಯಾಗಿ ಶೋಭಿಸುವ ಮರು ಬಳಕೆಯ ಪ್ರಯತ್ನ ವನ್ನು ಮಂಗಳೂರಿನ ಕಲಾವಿದೆ ಮೇಘಾ ಮೆಂಡನ್ ಮಾಡಿದ್ದಾರೆ.
ಕಳೆದ ನಾಲ್ಕು ಭಾನುವಾರಗಳಲ್ಲಿ ಈ ಬಾಟಲ್ ಕಲಾಕೃತಿ ರಚನೆಯ ಶಿಬಿರವನ್ನು ಮಾಡಿದ್ದು ಇದರಲ್ಲಿ ಮಕ್ಕಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿರಿಯರು ಭಾಗವಹಿಸಿದ್ದರು.
ಜಾಹೀರಾತು
ಇದರಲ್ಲಿ ರಚನೆಯಾದ ಬಾಟಲ್ ಕಲಾಕೃತಿ ಗಳ ಪ್ರದರ್ಶನ ಈಗ ಸಾರ್ವಜನಿಕರಿಗೆ ಮೇ 25 ಮತ್ತು 26 ರಂದು ಬೊಕ್ಕ ಪಟ್ಟ್ನ ದ ಫಲ್ಗುಣಿ ನದೀ ಕಿನಾರೆಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಮನೆ ಮನೆಯ ತ್ಯಾಜ್ಯ ಗಳು ಬೀದಿ, ನದಿ, ಸಾಗರ ಬದಿಗೆ ಹೋಗದೇ ಮನೆಯಲ್ಲಿ ಕಲಾಕೃತಿ ಗಳಾಗು ವ ರೀತಿಯಲ್ಲಿ ಮರು ಬಳಕೆ ಆಗಬೇಕೆಂಬುದು ಈ ಪ್ರಕಾರದ ಪ್ರಯತ್ನ.
- ದಿನೇಶ್ ಹೊಳ್ಳ, ಖ್ಯಾತ ಕಲಾವಿದರು, ಪರಿಸರಪ್ರೇಮಿ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ತ್ಯಾಜ್ಯವೆಂದು ಎಸೆದ ಬಾಟಲ್ ಗೆ ಹೊಸರೂಪ"