ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸುವ ಕುರಿತಂತೆ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿಯ ಸೂಚನೆಗಳನ್ನು ಪಾಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ.
ದೇಶದಲ್ಲಿ ಹೆಚ್ಚುತ್ತಿರುವ ಸಂಚಾರ ನಿಯಮಗಳ ಉಲ್ಲಂಘನೆಗಳನ್ನು ಗಮನಿಸಿ ಅವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮಕ್ಕೆ ತೀರ್ಮಾನಿಸಿ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ಚಾಲನಾ ಪರವಾನಗಿಗಳನ್ನು 3 ತಿಂಗಳಿಗೆ ಕಡಿಮೆ ಇಲ್ಲದಂತೆ ರದ್ದು ಮಾಡಲು ಸೂಚಿಸಿರುತ್ತದೆ. ಆದುದರಿಂದ ಮೋಟಾರು ವಾಹನ ಕಾಯ್ದೆ 1988 ಉಲ್ಲಂಘನೆ ಮಾಡುವ ವಾಹನ ಚಾಲಕರ ವಿರುದ್ಧ ಸೆಕ್ಷನ್ 19 ಮತ್ತು ಕೇಂದ್ರ ಮೋಟಾರ್ ವಾಹನ ನಿಯಮ 1989 ರ ರೂಲ್ 21 ರ ಅಡಿಯಲ್ಲಿ ಕ್ರಮ ಕೈಗೊಂಡು ಕಡ್ಡಾಯವಾಗಿ ಅಂತಹ ವಾಹನ ಚಾಲಕರ ಚಾಲನಾ ಪರವಾನಗಿಗಳನ್ನು ಅಮಾನತಿನಲ್ಲಿರಿಸಲು ಸಂಬಂಧಪಟ್ಟ ಸಾರಿಗೆ ಅಧಿಕಾರಿಯವರಿಗೆ ವರದಿ ಸಲ್ಲಿಸಲು ತಿರ್ಮಾನಿಸಲಾಗಿರುತ್ತದೆ.
- ಅತಿ ವೇಗದ ಚಾಲನೆ.
- ಗೂಡ್ಸ್ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ ಭಾರ ಮತ್ತು ಜನರನ್ನು ಹೊತ್ತು ಸಾಗಿಸುವುದು.
- ಮದ್ಯಪಾನ ಮಾಡಿ ಮತ್ತು ಮಾದಕ ದ್ರವ್ಯ ಸೇವನೆ ಮಾಡಿ ವಾಹನವನ್ನು ಚಲಾಯಿಸುವುದು.
- ವಾಹನ ಚಲಾಯಿಸುವಾಗ ಮೊಬೈಲ್ ಫೋನಿನಲ್ಲಿ ಮಾತನಾಡುವುದು.
- ಕೆಂಪು ದೀಪವನ್ನು ದಾಟಿ ವಾಹನವನ್ನು ಚಲಾಯಿಸುವುದು.
ಈ ರೀತಿಯಾಗಿ ಸಂಚಾರಿ ನಿಯಮ ಉಲ್ಲಂಘಿಸದೆ ಜಾಗ್ರತೆ ವಹಿಸಲು ಎಸ್ಪಿ ಸೂಚಿಸಿದ್ದಾರೆ.
ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಹಕಾರ ನೀಡುವುದು ಸಾರ್ವಜನಿಕರ ಕರ್ತವ್ಯ. ಆದರೆ ಇದನ್ನು ಪೊಲೀಸರು ಯಾವುದೇ ಪ್ರಭಾವಗಳಿಗೆ ಒಳಗಾಗದೆ ಒತ್ತಡರಹಿತವಾಗಿ ಜಾರಿಗೊಳಿಸಬೇಕಾದದ್ದು ಅವಶ್ಯಕ.
Be the first to comment on "ಸಂಚಾರಿ ನಿಯಮ ಉಲ್ಲಂಘಿಸಿದರೆ ಡ್ರೈವಿಂಗ್ ಲೈಸನ್ಸ್ ಅಮಾನತು ನಿಯಮ ಕಟ್ಟುನಿಟ್ಟಿನ ಪಾಲನೆ: ಎಸ್ಪಿ"