ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಮಹಿಳಾ ಪೊಲೀಸರನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ರಚನೆಯಾಗಿದ್ದು, ಬಂಟ್ವಾಳ ವ್ಯಾಪ್ತಿಯಲ್ಲಿ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ಸೋಮವಾರ ಚಾಲನೆ ನೀಡಿದರು.
ಬಿ.ಸಿ.ರೋಡಿನ ಜಂಕ್ಷನ್‌ನಲ್ಲಿ ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿದ ಅವರು, ಡಿಜಿ, ಐಜಿಪಿ ಅವರ ಸೂಚನೆ ಮೇರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಮಹಿಳಾ ಪಡೆ ರಚಿಸಲಾಗಿದೆ ಎಂದರು.
ಈ ಪಡೆಯನ್ನು ಒಬ್ಬರು ಎಸ್ಸೈ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಕಾಲೇಜುಗಳು, ಪಾರ್ಕ್‌ಗಳು, ರೈಲ್ವೆ ನಿಲ್ದಾಣ, ಮಾರ್ಕೆಟ್ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಪಡೆಯ ಸಿಬ್ಬಂದಿ ನಿಯೋಜಿಸಲಾಗುವುದು. ದ.ಕ. ವ್ಯಾಪ್ತಿಯಲ್ಲಿ 500 ಮಂದಿ ಮಹಿಳಾ ಪೊಲೀಸರಿದ್ದು, ಒಂದೊಂದು ಪಾಯಿಂಟ್‌ಗಳಲ್ಲಿ 3ರಿಂದ 5ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಅಪರಾಧ ಸಂಬಂಧಿತ ಪ್ರಕರಣಗಳು ನಡೆದಾಗ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಪ್ರಕರಣಗಳು ಬರಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಡಾ.ವಿಕ್ರಂ ವಿ. ಅಮ್ಟೆ, ಎಎಸ್ಪಿ ಸೈದುಲ್ ಅಡಾವತ್, ಬಂಟ್ವಾಳ ವೃತ್ತ ನೀರೀಕ್ಷಕ ಶರಣಗೌಡ, ಸುಳ್ಯ ಸಿಪಿಐ ಸತೀಶ್ ಕುಮಾರ್, ಬೆಳ್ತಂಗಡಿ ಸಿಪಿಐ ಸಂದೇಶ್, ಬಂಟ್ವಾಳ ಎಸ್ಸೈಗಳಾದ ಪ್ರಸನ್ನ, ಸುಧಾಕರ ತೋಮ್ಟೆ, ಮಂಜುನಾಥ, ನಾಯಾರಣ ರೈ, ಸಿಬ್ಬಂದಿ ಯೋಗೀಶ್, ಬೀಟ್ ಸದಸ್ಯರಾದ ವಸಂತಿ ಗಂಗಾಧರ, ಜೆಸಿಂತಾ ಹಾಜರಿದ್ದರು.
Be the first to comment on "ಬಂಟ್ವಾಳದಲ್ಲಿ ರಾಣಿ ಅಬ್ಬಕ್ಕ ಪಡೆಗೆ ಚಾಲನೆ"