ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ಸಹಿತ ದ.ಕ ಜಿಲ್ಲೆ ಹಾಗೂ ರಾಜ್ಯದ ಪ್ರಮುಖ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಸುದ್ದಿ, ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127
ಇದನ್ನೂ ಓದಿರಿ:
ಗೋಬರ್ ಗ್ಯಾಸ್ ಗುಂಡಿಯೊಳಗೆ ಬಿದ್ದಿದ್ದ ಕಾಡುಕೋಣವೊಂದು ಕೊನೆಗೂ ಯಶಸ್ವಿಯಾಗಿ ಮೇಲೆ ಬಂದಿದೆ!
ಕಾಡಬೆಟ್ಟು ಗ್ರಾಮದ ಕಾಡಬೆಟ್ಟು ಪೂರ್ಲೊಟ್ಟು ಎಂಬಲ್ಲಿ ಪೂರ್ಲೊಟ್ಟು ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೊಬ್ಬರ ಗ್ಯಾಸ್ ನ ಗುಂಡಿಗೆ ಕಾಡುಕೋಣ ಬಿದ್ದಿತ್ತು. ಮೇಲೆ ಬರಲು ಸಾಧ್ಯವಾಗದೆ ಸಿಕ್ಕಿಹಾಕಿಗೊಂಡಿದ್ದು, ಶನಿವಾರ ಬೆಳಗ್ಗೆ ಮನೆಯವರ ಗಮನಕ್ಕೆ ಬಂದಿದ್ದು ಅವರು ಬಂಟ್ವಾಳ ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ಬಳಿಕ ಬಂಟ್ವಾಳ ವಲಯ ಅರಣ್ಯಾಧಿಕಾರಿ ಸುರೇಶ್ ಸ್ಥಳಕ್ಕೆ ಬೇಟಿ ನೀಡಿ ಕಾಡುಕೋಣವನ್ನು ಜೆಸಿಬಿ ಯಂತ್ರದ ಮುಖಾಂತರ ಗೊಬ್ಬರ ಗುಂಡಿಯಿಂದ ಯಶಸ್ವಿಯಾಗಿ ಹೊರಗಡೆ ತೆಗೆಯುವ ಕಾರ್ಯಾಚರಣೆ ನಡೆಸಿದರು.
ಉಪವಲಯ ಅರಣ್ಯಾಧಿಕಾರಿ ಅನಿಲ್, ಡಾ. ಅವಿನಾಶ್ ಭಟ್, ಸ್ನೇಕ್ ಕಿರಣ್ , ನಿತ್ಯಪ್ರಕಾಶ್, ಶ್ರೀಪ್ರಸಾದ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ವಿನಯ್, ಲಕ್ಷ್ಮೀನಾರಾಯಣ್, ಸ್ಮಿತಾ, ಅನಿತಾ ಹಾಗೂ ಪಂಚಾಯತ್ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರೈ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಸುಳ್ಯದಲ್ಲೂ ಮೇಲೆ ಬಂತು:
ಅದೇ ರೀತಿ ಸುಳ್ಯ ತಾಲೂಕಿನ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಬಿದ್ದ ಕಾಡುಕಾಟಿಯನ್ನು ಅಡಿಕೆ ಮರದ ಪಾಲದ ಸಹಾಯದಿಂದ ಮೇಲೆತ್ತಲಾಯಿತು. ಶನಿವಾರ ಬೆಳಗ್ಗೆ ಮಾವಿನಕಟ್ಟೆ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಕೆರೆಗೆ ಕಾಡುಕೋಣ ಬಿದ್ದಿರುವುದು ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿಗಳು ಆಗಮಿಸಿ ಕಾಡುಕೋಣವನ್ನು ಕೆರೆಯಿಂದ ಮೇಲೆತ್ತುವ ಪ್ರಯತ್ನ ಮಾಡಿದರು. ಅಡಿಕೆ ಮರದ ಪಾಲವನ್ನು ತಯಾರು ಮಾಡಿ ಕೆರೆಗೆ ಇಳಿಸಿದ್ದು ಕಾಡುಕೋಣ ಈ ಪಾಲದಲ್ಲಿ ಮೇಲೆ ಬಂತು ಎಂದು ಮಾಹಿತಿ ಲಭಿಸಿದೆ.
Be the first to comment on "ಕೊನೆಗೂ ಮೇಲೆ ಬಂದ ಕಾಡುಕೋಣ – ಕಾರ್ಯಾಚರಣೆ ಯಶಸ್ವಿ"