ನವೋದಯ ಮಿತ್ರ ಕಲಾ ವೃಂದ (ರಿ )ಹಾಗೂ ನೇತ್ರಾವತಿ ಮಾತೃ ಮಂಡಳಿ ನೆತ್ರಕೆರೆ 32ನೇ ವಾರ್ಷಿಕೋತ್ಸವ ಇತೀಚೆಗೆ ನೆತ್ರೆಕೆರೆ ಶಾಲಾ ಮೈದಾನದಲ್ಲಿ ನಡೆಯಿತು.
ಬೆಳಗ್ಗೆ ಅಶ್ವಥಕಟ್ಟೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆದು ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಶ್ರೀ ರಾಮ ಶಾಲೆ ಫರಂಗಿಪೇಟೆ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಜಯರಾಮ ಶೇಕ ಮಾತನಾಡಿ ಸಂಘದ ಕಾರ್ಯಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲ್ಯಾಘಿಸಿದರು. ಈ ಸಂದರ್ಭದಲ್ಲಿ ನೆತ್ರೆಕೆರೆ ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕಿಯರಾದ ಸೀತಾಲಕ್ಷ್ಮಿ ಹಾಗೂ ರೇಣುಕಾ ಅವರನ್ನು ಸನ್ಮಾನಿಸಿ ಸೇವೆಯ ಬಗ್ಗೆ ಸಂಘದ ಸಂಚಾಲಕರಾದ ದಾಮೋದರ ನೆತ್ರೆಕೆರೆ ಪ್ರಸ್ತಾಪನೆಯೊಂದಿಗೆ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಸುರೇಶ ಭಂಡಾರಿ ಅರ್ಬಿ ಸ್ವಾಗತಿಸಿದರು.ಗೌರವಾಧ್ಯಕ್ಷ ಸುಬ್ರಹ್ಮಣ್ಯ ರಾವ್ ಮಾತೃ ಮಂಡಳಿಯ ಸಂಚಾಲಕರಾದ ಲಲಿತಾ ಸುಂದರ್ ಶಾಲೆಯ ಮುಕ್ಯೋಪಾದ್ಯಾಯಿನಿ ಗುಣರತ್ನ ಟೀಚರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷ ರಾದ ವಿಶ್ವನಾಥ ಕುಲಾಲ್ ವಂದಿಸಿದರು. ಸಂತೋಷ ನೇತ್ರೆಕೆರೆ ಸನ್ಮಾನ ಪತ್ರ ವಾಚಿಸಿದರು. ಸಂತೋಷ್ ಏನ್ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ಮಕ್ಕಳ ಹಾಗೂ ಮಾತೃ ಮಂಡಳಿಯ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು ಹಾಗೂ ಸಂಘದ ಸದಸ್ಯರು ಅಭಿನಯಿಸಿದ “ಅಪುಜಿಂದ್ ಪನೊರ್ಚಿ “ಮತ್ತು ಅತಿಥಿ ಕಲಾವಿದರ ನಟನೆಯ “ಆರ್ ಪನ್ಲೆಕ “ಎಂಬ ನಾಟಕಗಳು ಪ್ರದರ್ಶನವಾಯಿತು.
Be the first to comment on "ನವೋದಯ ಮಿತ್ರ ಕಲಾವೃಂದ ವಾರ್ಷಿಕೋತ್ಸವ"