ರಿಪ್ಪರ್ – ತೆರೆಗೆ ಬರುತ್ತಿದೆ ರಿಯಲ್ ಕಹಾನಿ

ರಿಪ್ಪರ್ ಚಂದ್ರನ್!!!

ಜಾಹೀರಾತು

ದಶಕಗಳ ಹಿಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ರಾತ್ರಿ ನಿದ್ದೆ ಮಾಡಲೂ ಬಿಡದಿದ್ದ ಹೆಸರು ಇದು. ರಿಪ್ಪರ್ ಮೂಲಕವೇ ಹಲವು ಕೊಲೆಗಳನ್ನು ಮಾಡಿದ್ದ ಚಂದ್ರನ್ ಅಂತ್ಯವೂ ಅಷ್ಟೇ ಆಸಕ್ತಿದಾಯಕ. ಒಂದು ಕಾಲದ ಬೆಚ್ಚಿಬೀಳಿಸುವ ಕ್ರೈಮ್ ಕಹಾನಿಯನ್ನು ನೆನಪಿಸಿ, ಮತ್ತೆ ಆ ಲೋಕಕ್ಕೆ ಒಯ್ಯುವ ಪ್ರಯತ್ನ ಮಾಡಲಿದ್ದಾರೆ ನಿರ್ದೇಶಕ ಕೃಷ್ಣ ಬೆಳ್ತಂಗಡಿ.

ರಿಪ್ಪರ್ ಚಿತ್ರದ ಒಂದು ದೃಶ್ಯ

ಜಿ.ಕೆ. ರಿಯಲ್ ಇಮೇಜಸ್ ಲಾಂಛನದಲ್ಲಿ ಚಿತ್ರದ ಚಿತ್ರೀಕರಣ ಹಾಗೂ ಇತರ ಬಹುತೇಕ ಕೆಲಸಗಳು ಮುಕ್ತಾಯಗೊಂಡಿವೆ. ಇನ್ನೇನಿದ್ದರೂ ಸಿನಿಮಾ ನೋಡುವ ದಿನಕ್ಕೆ ಕಾಯೋದು.

ಜಿ.ಕೆ ರಿಯಲ್ ಇಮೇಜಸ್ ಲಾಂಛನದಲ್ಲಿ ಕೃಷ್ಣ ಬೆಳ್ತಂಗಡಿ ಮತ್ತು ಸ್ನೇಹಿತರು ನಿರ್ಮಾಣ ಮಾಡಿರುವ ‘ರಿಪ್ಪರ್’ಚಿತ್ರಕ್ಕೆ ಕೃಷ್ಣ ಬೆಳ್ತಂಗಡಿ ನಿರ್ದೇಶನ ಇದೆ. ಈ ಹಿಂದೆ ‘ಬಣ್ಣದ ಕೊಡೆ’ ಎಂಬ ಚಿತ್ರ ನಿರ್ದೇಶನ ಮಾಡಿ ಗಮನಸೆಳೆದಿದ್ದ ಕೃಷ್ಣ ಬೆಳ್ತಂಗಡಿ, ನಂತರ ಧಾರಾವಾಹಿಗಳಿಗೆ ಸಂಭಾಷಣಾಕಾರರಾಗಿ ಗುರುತಿಸಿಕೊಂಡಿದ್ದರು. ನೂರಕ್ಕೂ ಹೆಚ್ಚು ಜಾಹೀರಾತು ಚಿತ್ರ ಹಾಗೂ ನೂರ ಐವತ್ತಕ್ಕೂ ಹೆಚ್ಚು ಸಾಕ್ಷ್ಯ ಚಿತ್ರ ನಿರ್ದೇಶನ ಮಾಡಿರುವ ಕೃಷ್ಣ ಬೆಳ್ತಂಗಡಿ ಅವರು ತಮ್ಮ ಮೊದಲ ಚಿತ್ರದ ನಂತರ ಸುಮಾರು ನಾಲ್ಕು ವರ್ಷದ ಅಂತರದ ಬಳಿಕ ಮತ್ತೆ ‘ರಿಪ್ಪರ್’ಚಿತ್ರದ ಮೂಲಕ ಹಿರಿತೆರೆಗೆ ಹಿಂತಿರುಗಿದ್ದಾರೆ.

ಮಂಗಳೂರು, ಆಗುಂಬೆ ಪರಿಸರ ಮತ್ತು ಬೆಂಗಳೂರಿನ ಪರಿಸರದಲ್ಲಿ ಎರಡು ಹಂತದಲ್ಲಿ ಒಟ್ಟು 30 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಕನ್ನಡ ತಮಿಳು ನಟ ಹಾಗೂ ರಂಗಭೂಮಿ ಕಲಾವಿದ ಕೌಸ್ತುಭ್ ಜಯಕುಮಾರ್ ದರೋಡೆಕೋರನ ಪಾತ್ರದಲ್ಲಿ ನಟಿಸಿದ್ದು, ಇವರಿಗೆ ಮುಂಬಯಿಯ ಬೆಡಗಿ ಅಮುಲ್ ಗೌಡ ಸಾಥ್ ನೀಡಿದ್ದಾರೆ. ನಾಯಕನ ಪಾತ್ರದಲ್ಲಿ ರಾಧಾರಮಣ ಧಾರಾವಾಹಿಯ ಸುಮೇದು ಖ್ಯಾತಿಯ ಶ್ರೀರಾಮ್, ನಾಯಕಿಯಾಗಿ ಕೊಡಗಿನ ಬೆಡಗಿ ಸಾನ್ವಿ ನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ಸಿನಿಮಾ ಹಾಗೂ ದಾರಾವಾಹಿಗಳ ಬಹುತೇಕ ಪ್ರಮುಖ ಕಲಾವಿದರು ನಟಿಸಿದ್ದು, ಇದೀಗ ಎಡಿಟಿಂಗ್ ಶುರು ಆಗುವ ಮೂಲಕ ಪ್ರೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರಕ್ಕೆ ಅನಿಲ್ಕುಮಾರ್ ಛಾಯಾಗ್ರಹಣವಿದ್ದು, ಮಂಜುನಾಥ ಹುಣಸೂರು, ಪ್ರಭಾಕರ ಪ್ರಭು ಹಾಗೂ ಅರ್ಪಿತಾ ಮೈಸೂರು ಇವರ ಸಹ ನಿರ್ದೇಶನವಿದೆ. ಹಿತನ್ ಹಾಸನ್ ಸಂಗೀತ, ಮುಕ್ತರಾಜು ಅವರ ಸಂಕಲನ ಚಿತ್ರಕ್ಕಿದೆ.

ಕೃಷ್ಣ ಬೆಳ್ತಂಗಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60-70 ವಯಸ್ಸಿನವರಿಗಂತೂ ಚಂದ್ರನ್ ಹೆಸರು ನೆನಪಿರುತ್ತದೆ. ಆತನ ಕಥೆಯ ಅನಾವರಣಕ್ಕಾಗಿ ಕೃಷ್ಣ ಬೆಳ್ತಂಗಡಿ ಸಾಕಷ್ಟು ಹೋಂ ವರ್ಕ್ ಮಾಡಿದ್ದಾರೆ. ಹಲವು ಪೊಲೀಸ್ ಅಧಿಕಾರಿಗಳು, ಆ ಕಾಲದಲ್ಲಿ ಚಂದ್ರನ್ ಪ್ರಕರಣ ನಿರ್ವಹಿಸುತ್ತಿದ್ದ ಅಧಿಕಾರಿಗಳ ಸಂಪರ್ಕ, ಸಂದರ್ಶನದ ಬಳಿಕ ಸುಂದರ ಚಿತ್ರ ಹೊರಬರಲಿದೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಮೂರನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ ಜಾಹೀರಾತುಗಳಿಗೆ ಸಂಪರ್ಕ ಸಂಖ್ಯೆ: 9448548127

ಜಾಹೀರಾತು

About the Author

Harish Mambady
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Be the first to comment on "ರಿಪ್ಪರ್ – ತೆರೆಗೆ ಬರುತ್ತಿದೆ ರಿಯಲ್ ಕಹಾನಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*