ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಉಪಸ್ಥಿತಿಯಲ್ಲಿ ಏ.9ರಂದು ನಡೆಯಲಿರುವ ಜೀವನದಾನ ಮತ್ತು ಎ.11ರಂದು ನಡೆಯಲಿರುವ ಮಹಾಪಾದುಕಾಪೂಜೆಯ ಅಂಗವಾಗಿ ಸಮಾಲೋಚನೆ ಸಭೆ ಭಾನುವಾರ ನಡೆಯಿತು.
ಆಯೋಜನ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ 26ನೇ ಸನ್ಯಾಸಗ್ರಹಣ ದಿನಾಚರಣೆ ಅಂಗವಾಗಿ ಕಷ್ಟ ನಷ್ಟಗಳಿಗೆ ಒಳಗಾಗಿ ಬದುಕಿನ ಬೆಳಕು ಕಾಣದ ಕುಟುಂಬಕ್ಕೆ ಸದಾಶ್ರಯ ಜೀವನದಾನ ಮತ್ತು 26ನೇ ಯೋಗಪಟ್ಟಾಭಿಷೇಕ ದಿನಾಚರಣೆ ಅಂಗವಾಗಿ ಸಹಸ್ರ ಸಹಸ್ರ ಶಿಷ್ಯ ಭಕ್ತರಿಂದ ಮಹಾಪಾದುಕಾಪೂಜೆ ನೆರವೇರಲಿದೆ. ಎ.11ರಂದು ನಡೆಯುವ ಮಹಾಪಾದುಕಾ ಪೂಜೆಯಲ್ಲಿ ಸುಮಾರು ೫೦೦೦ಕ್ಕೂ ಅಽಕ ಅಽಕ ಶಿಷ್ಯಭಕ್ತರು ಪಾದುಕಾ ಪೂಜೆ ನೆರವೇರಿಸಲಿದ್ದಾರೆ. ಈಗಾಗಲೇ 4 ಸಾವಿರ ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಹೇಳಿದರು.
ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪ್ಪು ಅವರು ವಿವಿಧ ಉಪಸಮಿತಿಗಳ ಜವಾಬ್ದಾರಿ ಮತ್ತು ಪ್ರಗತಿ ಕಾರ್ಯವನ್ನು ವಿಮರ್ಶಿಸಿದರು. ಆಯೋಜನ ಸಮಿತಿ ಕಾರ್ಯದರ್ಶಿ ಸೇರಾಜೆ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ಪ್ರೊ.ಟಿ.ಶ್ರೀಕೃಷ್ಣ ಭಟ್, ಉಪಾಧ್ಯಕ್ಷ ಅಶೋಕ್ ಕೆದ್ಲ, ಉಪಾಧ್ಯಕ್ಷ ಉದಯ ಕುಮಾರ್ ಖಂಡಿಗ, ಕೋಶಾಽಕಾರಿ ಬಂಗಾರಡ್ಕ ಜನಾರ್ದನ ಭಟ್, ಧರ್ಮ ಕರ್ಮ ವಿಭಾಗದ ಸಹಕಾರ್ಯದರ್ಶಿ ಕೇಶವಪ್ರಸಾದ ಕೂಟೇಲು, ಸತ್ಯನಾರಾಯಣ ಮೊಗ್ರ, ಮಹೇಶ್ ಚಟ್ನಳ್ಳಿ, ಶ್ರೀನಾಥ್ ಸಾರಂಗ, ಭಾಸ್ಕರ ಹೆಗ್ಡೆ ಕೊಡಗಿಬಲು, ಮಂಗಳೂರು ಹೋಬಳಿಯ ಮೂರು ಮಂಡಲಗಳ ಪದಾಧಿಕಾರಿಗಳು, ಕಾರ್ಯಾಲಯ ಕಾರ್ಯದರ್ಶಿ ಶಿವಪ್ರಸಾದ ಮತ್ತಿತರರು ಉಪಸ್ಥಿತರಿದ್ದರು.
Be the first to comment on "ಮಹಾಪಾದುಕಾಪೂಜೆ: ಸಮಾಲೋಚನಾ ಸಭೆ"