ಪ್ರತಿ ಶಾಲೆಗಳಲ್ಲೂ ಅವಳಿ ಮಕ್ಕಳು ಒಂದೇ ರೀತಿ ಇದ್ದು, ಶಿಕ್ಷಕರಿಗೂ ಕೆಲವೊಮ್ಮೆ ಗೊಂದಲ ಮೂಡಿಸುವುದುಂಟು. ಆದರೆ ಬಂಟ್ವಾಳ ತಾಲೂಕಿನ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸರಕಾರಿ ಪ್ರೌಢಶಾಲೆಯಲ್ಲಿ ಅವಳಿ ಮಕ್ಕಳ ಸಂಖ್ಯೆ ಹತ್ತು ಜೋಡಿ. ಒಟ್ಟು 20 ಮಕ್ಕಳು ಇತ್ತೀಚೆಗೆ ಶಾಲೆಯಲ್ಲಿ ಗ್ರೂಪ್ ಫೊಟೊ ತೆಗೆಸಿಕೊಂಡು ಶಾಲೆಯ ಇತಿಹಾಸಕ್ಕೆ ಸ್ಮರಣಾರ್ಹ ದಾಖಲಾತಿಯಾಗಿಬಿಟ್ಟರು.
ಜಾಹೀರಾತು
ಮನ್ವಿತ್ ಆರ್. -ಮನೀಷ್ ಆರ್, ಸೂರಜ್ ಶೆಣೈ- ಸುದೀಪ್ ಶೆಣೈ, ಅಮಿತ್ ಪಿ.- ನಮಿತ್ ಪಿ, ಜನಾರ್ದನ- ಜಲಜಾಕ್ಷಿ, ಲತಾ-ಲಕ್ಷ್ಮಿ, ಅಭಿಷೇಕ್- ಅಭಿಜಿತ್, ಹರ್ಷಾ ಎಂ. ಕುಲಾಲ್- ಹರ್ಷಿತಾ ಎಂ.ಕುಲಾಲ್, ಸುರಕ್ಷಾ-ಸಮೀಕ್ಷಾ, ಶೋಭಾ- ಶೋಭಿತಾ, ಸೌಮ್ಯಾ- ಸೌಜನ್ಯಾ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅವಳಿ ವಿದ್ಯಾರ್ಥಿಗಳು. ಇವರನ್ನು ಗುರುತಿಸಲು ಕಷ್ಟಪಡಬೇಕಾಗುತ್ತದೆ, ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಅರಿತುಕೊಂಡು ಗುರುತಿಸುತ್ತೇವೆ ಎಂದು ಶಾಲೆಯ ಶಿಕ್ಷಕ ಹರಿಪ್ರಸಾದ್ ಈ ಸಂದರ್ಭ ತಿಳಿಸಿದರು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಅವಳಿ ಜವಳಿ ಜೋಡಿ, ಹತ್ತು ಇದೆ ನೋಡಿ"
Be the first to comment on "ಅವಳಿ ಜವಳಿ ಜೋಡಿ, ಹತ್ತು ಇದೆ ನೋಡಿ"