ಶತಮಾನೋತ್ತರ ಬೆಳ್ಳಿ ಹಬ್ಬ ಆಚರಣಾ ಹೊಸ್ತಿಲಲ್ಲಿರುವ ಸಂತ ಜೋಸೆಫರ ದೇವಾಲಯ ಬೊರಿಮಾರ್ ನಲ್ಲಿ ಪ್ರಾಯಶ್ಚಿತ ಕಾಲದ ವಿಶೇಷ ಧ್ಯಾನ ಕೂಟವನ್ನು ಮಾರ್ಚ್ 20 ರಿಂದ 24 ರ ತನಕ ಏರ್ಪಡಿಸಲಾಗಿತ್ತು. ವಿಶೇಷ ಧ್ಯಾನ ಕೂಟದ ಪ್ರಸ್ತುತಿ ಮತ್ತು ಪ್ರಸಂಗದಾರರಾಗಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪರು ಆದ ಅತೀ ವಂದನೀಯ ಡಾ| ಲಾರೆನ್ಸ್ ಮುಕ್ಕುಝಿಯವರು ಆಗಮಿಸಿದ್ದರು. ಕಳೆದ ಐದು ದಿವಸಗಳಲ್ಲಿ ನೂರಾರು ಭಕ್ತಾದಿಗಳು ಪ್ರಾರ್ಥನಾ ಕೂಟದಲ್ಲಿ ಭಾಗವಹಿಸಿದ್ದರು. ಪ್ರಾಯಶ್ಚಿತ ಕಾಲದಲ್ಲಿ ಇಂತಹ ಧ್ಯಾನ ಕೂಟವನ್ನು ಏರ್ಪಡಿಸಿದ ಪಾಲನಾ ಸಮಿತಿಯವರಿಗೆ ಧರ್ಮಾಧ್ಯಕ್ಷರು ಅಬಿನಂದಿಸಿದರು. ಬಿಷಪರನ್ನು ಪಾಲನಾ ಸಮಿತಿಯ ಪರವಾಗಿ ಚರ್ಚ್ ಧರ್ಮ ಗುರು ವಂದನೀಯ ಗ್ರೆಗರಿ ಪಿರೇರಾ ರವರು ಶಾಲು ಮತ್ತು ಹಣ್ಣು ಹಂಪಲುಗಳನ್ನು ನೀಡಿ ಸನ್ಮಾನಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ರೋಷನ್ ಬೊನಿಫಾಸ್ ಮಾರ್ಟಿಸ್ ರವರು ಗೌರವ ಸನ್ಮಾನ ಪತ್ರ ಓದಿ ಹಸ್ತಾಂತರಿಸಿದರು. ಬೆಂಗಳೂರಿನಿಂದ ಆಗಮಿಸಿ ಬ್ರದರ್ ಆಂಟನಿ ರಾಜ್ ಮತ್ತು ತಂಡದವರು ಗೀತೆಗಳನ್ನು ಹಾಡಿದರು. ನೆರೆದ ಎಲ್ಲಾ ಭಕ್ತಾಧಿಗಳಿಗೆ ಭೊಜನದ ವ್ಯವಸ್ಥೆ ಮಾಡಲಾಗಿತ್ತು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬೊರಿಮಾರ್ ಚರ್ಚ್ ನಲ್ಲಿ ವಿಶೇಷ ಧ್ಯಾನಕೂಟ"
Be the first to comment on "ಬೊರಿಮಾರ್ ಚರ್ಚ್ ನಲ್ಲಿ ವಿಶೇಷ ಧ್ಯಾನಕೂಟ"