ಲೈಕ್ ಫಾದರ್, ಲೈಕ್ ಸನ್(Like Father Like Son)
2013ರಲ್ಲಿ ಬಿಡುಗಡೆಯಾದ ಈ ಜಪಾನೀ ಚಿತ್ರ ಕ್ಯಾನೆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದದ್ದಷ್ಟೇ ಅಲ್ಲ, ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಪಡೆದಿದೆ. ಚಿತ್ರವನ್ನೇಕೆ ನೋಡಬೇಕು ಎಂಬುದರ ಕುರಿತು ಬರೆದಿದ್ದಾರೆ ಪ್ರಶಾಂತ್ ಭಟ್
- ಪ್ರಶಾಂತ್ ಭಟ್
ಅವನೊಬ್ಬ ಬಿಸಿನೆಸ್‌ಮೆನ್.ತನ್ನ ಕೆಲಸದಲ್ಲಿ ಮುಳುಗಿ ಪುಟ್ಟ ಮಗ,ಪತ್ನಿಗೆ ಸಮಯ ಕೊಡಲು ಕಷ್ಟಪಡುತ್ತಿರುತ್ತಾನೆ. ಮಗ ಹೀಗೇ ಆಗಲಿ ಅಂತ ಅವನಾಸೆ. ಒಂದು ದಿನ ಕೆಲಸದಿಂದ ಮರಳಬೇಕಾದರೆ ಅವನಿಗೆ ಪತ್ನಿ ಅವರ ಮಗ ಹುಟ್ಟಿದ ಆಸ್ಪತ್ರೆಯಿಂದ ಪೋನ್ ಬಂದಿತ್ತು. ಹೆರಿಗೆಯಾದ ಬಳಿಕ ಒಂದು ತಪ್ಪು ನಡೆದು ಮಕ್ಕಳು ಅದಲುಬದಲಾಗಿದೆ ಎಂದು ತಿಳಿಸುತ್ತಾಳೆ. ಅವರು ,ಅವರ ನಿಜವಾದ ಮಗ ಇರುವ ದಂಪತಿಗಳ ಭೇಟಿಯಾಗುತ್ತಾರೆ. ಆ ದಂಪತಿಗಳು ಬಡವರು, ಆದರೆ ಅವರೊಳಗೂ ಅವರ ಮಕ್ಕಳೊಂದಿಗೂ ಸಂಬಂಧ ಚೆನ್ನಾಗಿದೆ. ಹಲವಾರು ಭೇಟಿಗಳ ನಂತರ ಒಂದು ದಿನದ ಮಟ್ಟಿಗೆ ತಮ್ಮ ತಮ್ಮ ಮಕ್ಕಳ ಬಳಿ ಆ ಇಬ್ಬರು ದಂಪತಿಗಳು ಸಮಯ ಕಳೆಯುತ್ತಾರೆ.
ಈಗ ಪ್ರಶ್ನೆ ಹುಟ್ಟಿನಲ್ಲಿ ತನ್ನದಾದ ಆದರೆ ಬೇರಡಯವರ ಜೊತೆ ಬೆಳೆದ ಮಗುವನ್ನು ತನ್ನದಾಗಿಸಿಕೊಳ್ಳುವುದಾ? ಅಥವಾ ತಮ್ಮೊಡನೇ ಬೆಳೆದ ಇನ್ನೊಬ್ಬರ ಮಗುವನ್ನು ಅಪ್ಪಿಕೊಳ್ಳುವುದಾ?
ಇಡೀ ಸಿನಿಮಾ ಒಂದು ದೊಡ್ಡ ಕವಿತೆಯಂತಿದೆ.
ತಂದೆ ತಾಯಂದಿರ ಭಾವನೆಗಳು,ಪುಟ್ಟ ಮಕ್ಕಳ ಓಡಾಟಗಳು,ಮಿಡಿವ ಸಂಗೀತ ಎಲ್ಲವೂ ಕಾಡುತ್ತವೆ.
ವಿಳಾಸ ಗೊತ್ತಾಗದೆ ಕವಲಾಗುವ ದಾರಿಯಲ್ಲಿ ಎಡಕ್ಕೆ ತಿರುಗಲಾ ಬಲಕ್ಕೆ ತಿರುಗಲಾ ಅಂತ ಯೋಚಿಸುವ ಗಳಿಗೆ ಇದೆಯಲ್ಲ ಅದು ಬದುಕಿನ ನಿರ್ಧಾರಗಳಲ್ಲೂ ಬಂದರೆ…
******************************************************************************************************
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಮೂರನೇ ವರ್ಷದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬಂಟ್ವಾಳ ತಾಲೂಕಿನ ಸುದ್ದಿಗಳನ್ನು ಒದಗಿಸುವ ಮೊದಲನೇ ವೆಬ್ ಪತ್ರಿಕೆ
Be the first to comment on "ತಂದೆ, ಮಗನ ಭಾವನೆಗಳ ಬಂಧನ – Like Father, Like Son"