ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಒಟ್ಟು 182 ಅಭ್ಯರ್ಥಿಗಳ ಪಟ್ಟಿಯನ್ನು ಹೊಸದಿಲ್ಲಿಯಲ್ಲಿ ಬಿಜೆಪಿ ಚುನಾವಣಾ ಸಮಿತಿ ಅಧ್ಯಕ್ಷ ಜೆ.ಪಿ.ನಡ್ಡಾ ಗುರುವಾರ ಸಂಜೆ ಬಿಡುಗಡೆ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ವಾರಾಣಸಿಯಿಂದ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಗಾಂಧಿನಗರದಿಂದ, ಗೃಹ ಸಚಿವ ರಾಜನಾಥ್ ಸಿಂಗ್ ಲಖನೌದಿಂದ ಹಾಗೂ ನಾಗಪುರದಿಂದ ನಿತಿನ್ ಗಡ್ಕರಿ, ಉತ್ತರ ಪ್ರದೇಶದ ಅಮೇಥಿಯಲ್ಲಿ ಸ್ಮೃತಿ ಇರಾನಿ ಸ್ಪರ್ಧಿಸಲಿದ್ದಾರೆ ಅಮೇಥಿಯಲ್ಲಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ನಡುವೆ ಸ್ಪರ್ಧೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಕರ್ನಾಟಕ ಕರಾವಳಿಯಲ್ಲಿ ಹಾಲಿ ಸಂಸದರಾದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ಅವರಿಬ್ಬರೂ ಮತ್ತೆ ಕಣಕ್ಕಿಳಿಯಲಿದ್ದಾರೆ. ಇದರೊಂದಿಗೆ ಅಭ್ಯರ್ಥಿಯ ಬದಲಾವಣೆಯಾಗುವ ಕುರಿತು ಎದ್ದಿರುವ ಸಂಶಯಗಳಿಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ – ಜೆಡಿಎಸ್ ಮೈತ್ರಿಕೂಟ ಯಾರನ್ನು ಕಣಕ್ಕಿಳಿಸಲಿದೆ ಎಂಬ ಕುತೂಹಲವಷ್ಟೇ ಉಳಿದಿದೆ. ಈಗಾಗಲೇ ಈ ಕುರಿತು ಹೊಸದಿಲ್ಲಿಯಲ್ಲಿ ಇಂದು ಸಂಜೆ ಮಾತುಕತೆ ನಡೆದಿದೆ ಎನ್ನಲಾಗಿದ್ದು, ದ.ಕ. ಕ್ಷೇತ್ರದಲ್ಲಿ ಕಾಂಗ್ರೆಸ್, ಉಡುಪಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆ ಕುರಿತು ಗುರುವಾರವಿಡೀ ವಿಧವಿಧದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದಿವೆ.
ಬಿಜೆಪಿ ಇಂದು ಘೋಷಿಸಿದ ಅಭ್ಯರ್ಥಿಗಳ ಪೈಕಿ ಕರ್ನಾಟಕದ ಪಟ್ಟಿ ಹೀಗಿದೆ..
ಬೆಳಗಾವಿ: ಸುರೇಶ್ ಅಂಗಡಿ
ಬಾಗಲಕೋಟೆ: ಪಿಸಿ. ಗದ್ದಿಗೌಡರ್
ವಿಜಯಪುರ: ರಮೇಶ್ ಜಿಗಜಿಣಗಿ
ಕಲಬುರಗಿ: ಡಾ. ಉಮೇಶ್ ಜಾಧವ್
ಬೀದರ್: ಭಗವಂತ ಖೂಬಾ
ಬಳ್ಳಾರಿ: ದೇವೇಂದ್ರಪ್ಪ
ಹಾವೇರಿ: ಶಿವಕುಮಾರ್ ಉದಾಸಿ
ಧಾರವಾಡ: ಪ್ರಹ್ಲಾದ್ ಜೋಷಿ
ಉತ್ತರ ಕನ್ನಡ: ಅನಂತಕುಮಾರ ಹೆಗಡೆ
ದಾವಣಗೆರೆ: ಜಿ.ಎಂ. ಸಿದ್ದೇಶ್ವರ
ಶಿವಮೊಗ್ಗ: ಬಿ.ವೈ. ರಾಘವೇಂದ್ರ
ಉಡುಪಿ-ಚಿಕ್ಕಮಗಳೂರು: ಶೋಭಾ ಕರಂದ್ಲಾಜೆ
ಹಾಸನ: ಎ. ಮಂಜು
ದಕ್ಷಿಣ ಕನ್ನಡ: ನಳಿನ್ಕುಮಾರ್ ಕಟೀಲ್
ಚಿತ್ರದುರ್ಗ ಎ.ನಾರಾಯಣಸ್ವಾಮಿ
ತುಮಕೂರು: ಜಿ.ಎಸ್. ಬಸವರಾಜ್
ಮೈಸೂರು: ಪ್ರತಾಪ್ ಸಿಂಹ
ಚಾಮರಾಜನಗರ: ವಿ. ಶ್ರೀನಿವಾಸ ಪ್ರಸಾದ್
ಬೆಂಗಳೂರು ಉತ್ತರ: ಡಿವಿ ಸದಾನಂದ ಗೌಡ
ಬೆಂಗಳೂರು ಸೆಂಟ್ರಲ್: ಪಿಸಿ. ಮೋಹನ್
ಚಿಕ್ಕಬಳ್ಳಾಪುರ: ಬಿ.ಎನ್. ಬಚ್ಚೇಗೌಡ
ಕೊಪ್ಪಳ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಯಚೂರು, ಚಿಕ್ಕೋಡಿ ಮತ್ತು ಮಂಡ್ಯ ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿಲ್ಲ.
Be the first to comment on "ದ.ಕ, ಉಡುಪಿಯಲ್ಲಿ ನಳಿನ್ ಕಟೀಲ್, ಶೋಭಾ ಕರಂದ್ಲಾಜೆ ಮತ್ತೆ ಸ್ಪರ್ಧೆ, ಕಾಂಗ್ರೆಸ್-ಜೆಡಿಎಸ್ ನಿಂದ ಯಾರು?"