ಮನುಷ್ಯನ ಪ್ರತಿಯೊಂದು ಸತ್ಕಾರ್ಯಗಳು ಅಲ್ಲಾಹನ ಸಂಪ್ರೀತಿಗಾಗಿ ಇರಬೇಕು. ಆತನ ಸಂಪ್ರೀತಿಯೇ ಮನುಷ್ಯನ ನಿಜವಾದ ಆಸ್ತಿಯಾಗಿದ್ದು ಇದರಿಂದ ಇಹ ಪರ ವಿಜಯ ಸಾದ್ಯ ಎಂದು ಪಿಡಬ್ಲೂಡಿ ಗುತ್ತಿಗೆದಾರ ಹಾಜಿ ಪಿ.ಬಿ.ಇಬ್ರಾಹಿಂ ಭಟ್ಕಳ ಹೇಳಿದರು.
ಕಲ್ಲಡ್ಕ – ಕೆ.ಸಿ ರೋಡ್ ನ ಮಸ್ಜಿದ್ ಅಲ್ ಜಾಮಿಅ ಆಯಿಷಾ ಇಬ್ರಾಹಿಂ ಇದರ ವತಿಯಿಂದ ಇಲ್ಲಿನ ಶೈಖುನಾ ಜಬ್ಬಾರ್ ಉಸ್ತಾದ್ ವೇದಿಕೆಯಲ್ಲಿ ನಡೆದ ಧಾರ್ಮಿಕ ಪ್ರವಚನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಹುಟ್ಟೂರ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಕಲ್ಲಡ್ಕ ಮುಹಿಯ್ಯುದ್ದೀನ್ ಜುಮಾ ಮಸೀದಿ ಖತೀಬ್ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು. ಕೆ.ಸಿ.ರೋಡ್ ಮಸೀದಿ ಅದ್ಯಕ್ಷ ಪಿ.ಬಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಹಾಫಿಲ್ ನಿಜಾಮುದ್ದೀನ್ ಅಝರಿ ಕುಮ್ಮನಂ ಮುಖ್ಯ ಬಾಷನಗೈದರು.
ಕಲ್ಲಡ್ಕ ಎಂ.ಜೆ.ಎಂ.ಅದ್ಯಕ್ಷ ಹಾಜಿ ಜಿ ಅಬೂಬಕ್ಕರ್ ಗೋಳ್ತಮಜಲು, ಹಾಜಿ ಸುಲೈಮಾನ್ ನಾರ್ಶ, ಹಾಜಿ ಜಿ.ಮುಹಮ್ಮದ್ ಹನೀಫ್ ಗೋಳ್ತಮಜಲು, ಹಾಜಿ ಬಿ.ಕೆ.ಇದ್ದಿನಬ್ಬ ಕಲ್ಲಡ್ಕ, ಜಿ.ಎಸ್.ಸುಲೈಮಾನ್ ಹಾಜಿ ಕಲ್ಲಡ್ಕ, ಹಾಜಿ ಜಿ.ಯೂಸುಫ್ ಗೋಳ್ತಮಜಲು, ನವಾಝ್ ಕೆ.ಎನ್, ಹಾಜಿ ಕೆ.ಎಂ.ಶಾಫಿ, ಹಾಜಿ ಅಬ್ದುಲ್ ಹಮೀದ್ ಗೋಲ್ಡನ್, ದ.ಕ.ಜಿಲ್ಲಾ ವಕ್ಫ್ ಮಂಡಳಿ ಸಲಹಾ ಸಮಿತಿ ಸದಸ್ಯ ನಝೀರ್ ಮಠ, ಹಾಜಿ ಬಿ.ಎ.ಖಾದರ್ ಕೆ.ಸಿ.ರೋಡ್, ಪಿ. ಬಿ. ಶಾಹಿನ್ ಭಟ್ಕಳ, ಪಿ.ಬಿ.ಅಬ್ದುಲ್ ಅಝೀಝ್ ಬೋಳಂಗಡಿ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದ್ದರು.
ಕೆ.ಸಿ.ರೋಡ್ ಮಸೀದಿ ಖತೀಬ್ ಹೈದರ್ ದಾರಿಮಿ ಸ್ವಾಗತಿಸಿ, ಅಬ್ದುಲ್ಲಾ ಮುಸ್ಲಿಯಾರ್ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು
Be the first to comment on "ಭಗವಂತನ ಸಂಪ್ರೀತಿಯೇ ಮನುಷ್ಯನ ನಿಜವಾದ ಆಸ್ತಿ : ಪಿ.ಬಿ.ಇಬ್ರಾಹಿಂ ಭಟ್ಕಳ"