ನಮ್ಮ ಮನೆಯಲ್ಲಿ ಉತ್ಪತ್ತಿಯಾದ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದು ನಮ್ಮ ಕರ್ತವ್ಯ. ಕಸವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ಅದೂ ಸಹ ಆದಾಯದ ಮೂಲವಾಗ ಬಹುದು ಎಂದು ರಾಮಕೃಷ್ಣ ಮಿಶನ್ ನ ಸ್ವಚ್ಚ್ ಸೋಚ್ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ರಂಜನ್ ಬೆಲ್ಲರ್ಪಾಡಿ ತಿಳಿಸಿದರು.
ಕಾರ್ಮೆಲ್ ಕಾಲೇಜು, ಮೊಡಂಕಾಪು ಇಲ್ಲಿನ ಐ.ಕ್ಯು.ಎ.ಸಿ ಸೆಲ್ ಹಾಗೂ ರಾಮಕೃಷ್ಣ ಮಿಶನ್ ನ ಜಂಟಿ ಆಶ್ರಯದಲ್ಲಿ ನಡೆದ ಸ್ವಚ್ಛ್ ಸೋಚ್ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಂದರ್ಭ ಉಪಸ್ಥಿತರಿದ್ದ ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಬೆಲ್ಲಳ ಗೋಪಿನಾಥ ರಾವ್ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಅರ್ಥ ಮಾಡಿಕೊಂಡು ಇತರರಲ್ಲಿಯೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕೆಂದು ತಿಳಿಸಿದರು.
ಅದ್ಯಕ್ಷತೆಯನ್ನು ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಭಗಿನಿ ಸುಪ್ರಿಯಾ ಎ.ಸಿ ವಹಿಸಿಕೊಂಡಿದ್ದರು. ರಾಮಕೃಷ್ಣ ಮಿಶನ್ ನ ಸದಸ್ಯರಾದ ಸತೀಶ್ ಸದಾನಂದ, ವಿದ್ಯಾರ್ಥಿ ಸಂಘದ ನಾಯಕಿ ಭಾಗ್ಯಶ್ರೀ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಹಾಗೂ ಕಾರ್ಯಕ್ರಮದ ಸಂಯೋಜಕಿ ಫ಼್ಲೋರಿನ್ ಮಿನೆಜಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ತೃತೀಯ ಬಿ.ಕಾಂನ ಮೆಹಜಬೀನ್ ಕಾರ್ಯಕ್ರಮ ನಿರೂಪಿಸಿದರು. ರಕ್ಷಾ ಜೈನ್ ಸ್ವಾಗತಿಸಿ, ಅಯಿಷಾ ಸುಹಾನ ವಂದಿಸಿದರು.
Be the first to comment on "ನಮ್ಮ ಕಸ ನಮ್ಮ ಹೊಣೆ : ರಂಜನ್ ಬೆಲ್ರಪ್ಪಾಡಿ"