ಜೆಡಿಎಸ್ ಕಾರ್ಯಕರ್ತರ ಸಮಾಲೋಚನಾ ಸಭೆ ಕ್ಷೇತ್ರಾದ್ಯಕ್ಷ ಬಿ ಮೋಹನ್ ಅಧ್ಯಕ್ಷತೆಯಲ್ಲಿ ಬಿ.ಸಿ.ರೋಡಿನಲ್ಲಿ ನಡೆಯಿತು.
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಅಮರನಾಥ ಶೆಟ್ಟಿ ಈ ಚುನಾವಣೆಯಲ್ಲಿ ದ. ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದು ಮೈತ್ರಿಧರ್ಮ ಪಾಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಎಂ. ಬಿ ಸದಾಶಿವ ಕೇಂದ್ರ ಸರ್ಕಾರದ ವೈಫಲ್ಯ ಹಾಗೂ ರಾಜ್ಯ ಸರ್ಕಾರದ ಸಾಧನೆ ಬಗ್ಗೆ ವಿವರಣೆ ನೀಡಿದರು. ಅಲ್ಪಸಂಖ್ಯಾತ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಶಫಿ ಮಾತನಾಡಿ ಪಕ್ಷ ಸಂಘಟನೆಗೆ ಜಿಲ್ಲಾ ನಾಯಕರು ಕ್ಷೇತ್ರದಲ್ಲಿ ನಿರಂತರವಾಗಿ ಸಂಪರ್ಕ ದಲ್ಲಿರುವಂತೆ ಹಾಗೂ ಪಕ್ಷದ ಕಛೇರಿ ತಕ್ಷಣ ತೆರೆಯಲು ಸಲಹೆ ನೀಡಿದರು. ಜಿಲ್ಲಾ ಅಲ್ಪ ಸಂಖ್ಯಾತ ಪ್ರಧಾನ ಕಾರ್ಯದರ್ಶಿ ಹಾರೂನ್ ರಶೀದ್ ಬಂಟ್ವಾಳ, ಕಾಂಗ್ರೆಸ್ ನಾಯಕರು ಚುನಾವಣಾ ಸಮಯದಲ್ಲಿ ನಮ್ಮ ಪಕ್ಷವನ್ನು ಹಾಗೂ ಕಾರ್ಯಕರ್ತರನ್ನು ಗೌರವಯುತವಾಗಿ ನಡೆಸಿಕೊಂಡು ಹೋಗುವಂತೆ ನೋಡಿಕೊಳ್ಳಬೇಕೆಂದು ಜಿಲ್ಲೆಯ ನಾಯಕರಲ್ಲಿ ಮನವಿ ಮಾಡಿದರು.
ಜಿಲ್ಲಾ ಅಧ್ಯಕ್ಷರಾದ ಮೊಹಮ್ಮದ್ ಕುಂಞ, ಯುವ ಜಿಲ್ಲಾ ಅಧ್ಯಕ್ಷರಾದ ಅಕ್ಷಿತ್ ಸುವರ್ಣ,ಮಹಿಳಾ ಜಿಲ್ಲಾ ಅಧ್ಯಕ್ಷರಾದ ಸುಮತಿ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರಜೈನ್, ಹಿರಿಯ ಮುಖಂಡರಾದ ಪಿ,ಎ ರಹೀಂ, ಯುವ ನಾಯಕರಾದ ಅಮಾನುಲ್ಲಾ, ಮೊಹಮ್ಮದ್ ಸವಾಝ್, ರಫೀಕ್ ಕೊಚ್ಚಿ, ಮೊಹಮ್ಮದ್ ಶಫೀಕ್,ಸುಲೈಮಾನ್ ಅಕ್ಕರಂಗಡಿ, ಹರೀಶ್ ಕೊಟ್ಟಾರಿ, ಇಸ್ಹಾಕ್ ಕಲ್ಲಡ್ಕ, ಮಹಿಳಾ ಮುಖಂಡರಾದ ಕುಶಲ ಶೆಟ್ಟಿ,ಖೈರುನ್ನಿಸಾ ಹಾಗೂ ಇನ್ನಿತರ ಹಲವಾರು ಮುಖಂಡರು ಭಾಗವಹಿಸಿದ್ದರು. ಅಮಾನುಲ್ಲಾ ವಂದಿಸಿದರು.
Be the first to comment on "ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿಧರ್ಮ ಪಾಲನೆ: ಅಮರನಾಥ ಶೆಟ್ಟಿ"