ಬೋಳಂತೂರು: ರಕ್ತದಾನ ಶಿಬಿರ

ಜಾಹೀರಾತು

ಎಸ್‌ಎಸ್‌ಎಫ್ ಕಲ್ಲಡ್ಕ ಸೆಕ್ಟರ್, ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜು ಸಹಭಾಗಿತ್ವದಲ್ಲಿ ಎಸ್‌ಎಸ್‌ಎಫ್ ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ೫೮ನೇ ರಕ್ತದಾನ ಶಿಬಿರ ವಿಟ್ಲ ಸಮೀಪದ ಬೋಳಂತೂರು ಎನ್.ಸಿ ರೋಡ್‌ನಲ್ಲಿ ಭಾನುವಾರ ನಡೆಯಿತು.
ಅಸ್ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ದುವಾಃ ಆಶೀರ್ವಚನ ನೀಡಿದರು. ಮುಶ್ತಕುರ್ರಹ್ಮಾನ್ ತಂಙಳ್ ಚಟ್ಟೆಕಲ್ಲು ಉದ್ಘಾಟಿಸಿದರು. ಎಸ್‌ಎಸ್‌ಎಫ್ ಕಲ್ಲಡ್ಕ ಸೆಕ್ಟರ್ ಅಧ್ಯಕ್ಷ ಮಹಮ್ಮದ್ ಮಜೀದ್ ಅಧ್ಯಕ್ಷತೆ ವಹಿಸಿದ್ದರು. ದಾರುಲ್ ಅಶ್ ಅರಿಯ್ಯದ ವ್ಯವಸ್ಥಾಪಕ ಮಹಮ್ಮದಾಲಿ ಸಖಾಫಿ ಪ್ರಭಾಷಣ ಮಾಡಿದರು.

ಸಂದೇಶ ಭಾಷಣ ಮಾಡಿದ ಎಸ್‌ಎಸ್‌ಎಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಮಹಮ್ಮದ್ ಅಲಿ ತುರ್ಕಳಿಕೆ ಅವರು ಕೋಮುವಾದ ಹಾಗೂ ಭಯೋತ್ಪಾಧನೆಯನ್ನು ಎಲ್ಲಾ ಧರ್ಮವೂ ವಿರೋಧಿಸುತ್ತದೆ. ಸರ್ವ ಧರ್ಮಗಳು ಶಾಂತಿಯ ಸಂದೇಶ ನೀಡುತ್ತದೆ. ಕೋಮುವಾದ ದೇಶಕ್ಕೆ ಆಪತ್ತು. ಸರ್ವ ಧರ್ಮಿಯರು ಜತೆಯಾಗಿ ಕೋಮುವಾದವನ್ನು ಮಟ್ಟಹಾಕಬೇಕು. ದೇಶದಲ್ಲಿ ಕೋಮು ಸೌಹಾರ್ದತೆಗೆ ದಕ್ಕೆ ತರುವ ಯತ್ನಗಳು ದೇಶದ ದುರಂತವಾಗಿದೆ. ರಕ್ತದಾನಗಳ ಮೂಲಕ ಮಾನವೀಯ ಮೌಲ್ಯಗಳು ವೃದ್ಧಿಯಾಗುತ್ತದೆ ಎಂದರು.

ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಮಾತನಾಡಿ ರಕ್ತವನ್ನು ಶೇಖರಣೆ ಮಾಡುವ ಶಕ್ತಿ ಇರುವುದು ಮನುಷ್ಯರಿಗೆ ಮಾತ್ರ ಸಾಧ್ಯವಿದೆ. ರಕ್ತದಾನ ಕಾರ್ಯ ಶ್ರೇಷ್ಠ ಕಾರ್ಯವಾಗಿದೆ. ಅದು ಒಂದು ಜೀವವನ್ನು ರಕ್ಷಿಸಲು ಸಾಧ್ಯವಿದೆ. ಎಸ್‌ಎಸ್‌ಎಫ್ ದಾಖಲೆ ಮಟ್ಟದಲ್ಲಿ ರಕ್ತದಾನ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮದರಸದಲ್ಲಿ ಸೇವೆ ಸಲ್ಲಿಸಿದ ಅಲ್‌ಹಾಜ್ ಸುಲೈಮಾನ್ ಮುಸ್ಲಿಯಾರ್ ನಾರ್ಶ, ೫೦ ಬಾರಿಗಿಂತ ಹೆಚ್ಚು ರಕ್ತದಾನ ಮಾಡಿದ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಅಂತಾರಾಷ್ಟ್ರೀಯ ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ ಬೆಳ್ಳಿಪದಕ ಪಡೆದ ಕೃಷ್ಣಪ್ಪ ಕೊಕ್ಕಪುಣಿ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಇಸ್ಮಾಯಿಲ್ ಬಬ್ಬುಕಟ್ಟೆ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಸುಲೈಮಾನ್ ಮುಸ್ಲಿಯಾರ್, ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಮುತ್ತಲಿಬ್ ನಾರ್ಶ, ಚಂದ್ರಶೇಖರ ರೈ ಬೋಳಂತೂರು, ಅಬ್ದುಲ್ ಹಮೀದ್ ಮದನಿ, ಎಸ್.ಎಂ ಅಬೂಬಕ್ಕರ್, ಅಬ್ದುಲ್ ರಶೀದ್ ಹಾಜಿ ವಗ್ಗ, ಅಬೀದ್ ನಈಮಿ, ಅಕ್ಬರ್ ಅಲಿ ಮದನಿ, ಹಾರೀಸ್ ಪೆರಿಯಪಾದೆ, ಅಲಿ ಮದನಿ, ಇಬ್ರಾಹಿಂ ಕರೀಂ ಕದ್ಕರ್, ಅಬ್ದುಲ್ ಹಮೀದ್ ಮುಸ್ಲಿಯಾರ್, ಮುಸ್ತಫಾ ಕೋಡಪದವು, ಖಾದರ್ ಸಖಾಫಿ, ಅಬ್ಬಾಸ್ ಮುಸ್ಲಿಯಾರ್, ಜಯರಾಜ್, ರಫೀಕ್ ಮಾಡದ ಬಳಿ, ಸಿ.ಎಚ್ ರಝಾಕ್, ದಾವೂದ್, ಇಲ್ಯಾಸ್, ವಾಜೀದ್ ಹನೀಫಿ, ಜಬ್ಬಾರ್ ಕಣ್ಣೂರು, ಖಾದರ್ ಕೊಕ್ಕಪುಣಿ, ಅಬ್ದುಲ್ಲ ನಾರಂಕೋಡಿ ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
ಜಾಹೀರಾತು
ಜಾಹೀರಾತು

Be the first to comment on "ಬೋಳಂತೂರು: ರಕ್ತದಾನ ಶಿಬಿರ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*