ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಆರಂಭಗೊಂಡಿರುವ ಬ್ರಹ್ಮಕಲಶ ಉತ್ಸವಗಳ ಕಾರ್ಯಕ್ರಮಕ್ಕೆ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ವೃದ್ಧಿಸುತ್ತಿದ್ದು, ಶುಕ್ರವಾರ ಸುಮಾರು 50 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
ಮಾ.4ರಿಂದ ಶುಕ್ರವಾರದವರೆಗೆ 1.5 ಲಕ್ಷ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದು, ಬಹುತೇಕ ಅಷ್ಟೇ ಮಂದಿ ಉಪಾಹಾರ ಸ್ವೀಕರಿಸಿದ್ದಾರೆ.
ಭಾನುವಾರ ಮತ್ತು 13ರಂದು ವಿಶೇಷವಾದ ಕಾರ್ಯಕ್ರಮಗಳು ಇರುವ ಕಾರಣ ಆ ದಿನಗಳಲ್ಲಿ ಭಕ್ತರ ಸಂಖ್ಯೆ ವೃದ್ಧಿಸುವ ನಿರೀಕ್ಷೆ ಇರುವ ಕಾರಣ ಬಾಣಸಿಗರ ಸಹಿತ ಸ್ವಯಂಸೇವಕರ ಸಂಖ್ಯೆಯೂ ಅಧಿಕಗೊಳ್ಳಲಿದೆ. ಇದಕ್ಕಾಗಿ ಸಕಲ ತಯಾರಿಗಳನ್ನು ಮಾಡಲಾಗಿದೆ. ಎರಡೂ ದಿನ ವಿಶೇಷ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ.
ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಆಗಮಿಸಿದ ಎಲ್ಲ ಭಕ್ತರಿಗೂ ಆ ದಿನ ಲಡ್ಡುಪ್ರಸಾದ ವಿತರಿಸುವ ಸಂಕಲ್ಪ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ವಿಶೇಷವಾಗಿ ಪ್ರಸಾದರೂಪದ ಲಾಡುಗಳನ್ನು ತಯಾರಿಸುವ ಕಾರ್ಯ ಕಳೆದ ಮೂರು ದಿನಗಳಿಂದ ನಡೆಯುತ್ತಿದೆ. 10 ಮತ್ತು ೧೩ರಂದು ಆಗಮಿಸುವ ಭಕ್ತರಿಗೆ ಲಡ್ಡು ವಿಶೇಷ ಪ್ರಸಾದ ದೊರೆಯುತ್ತದೆ. ಒಟ್ಟು 3 ಲಕ್ಷದಷ್ಟು ಲಡ್ಡುಗಳನ್ನು ತಯಾರಿಸಲಾಗುತ್ತಿದೆ.
Be the first to comment on "ಪೊಳಲಿಗೆ ಭಕ್ತರ ಸಂಖ್ಯೆ ವೃದ್ಧಿ, ಐದು ದಿನಗಳಲ್ಲಿ 2 ಲಕ್ಷ ಜನರಿಂದ ಅನ್ನಪ್ರಸಾದ ಸ್ವೀಕಾರ"