ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಸೋಮವಾರ ಎಲ್ಲೆಡೆ ದೇವಸ್ಥಾನಗಳಲ್ಲಿ ಶಿವರಾತ್ರಿ ಆಚರಣೆ ನಡೆಸುತ್ತಿದ್ದರೆ, ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಹಿಂದು ರುದ್ರಭೂಮಿಯಲ್ಲಿ ಸುಮಾರು 15ಕ್ಕೂ ಅಧಿಕ ಭಜನಾ ತಂಡಗಳಿಂದ ಶಿವರಾತ್ರಿ ಆಚರಣೆ ನಡೆಯಿತು.
ಹಿಂದೂ ರುಧ್ರಭೂಮಿ ಸಮಿತಿ, ಅಭಿವೃದ್ಧಿ ಸಮಿತಿ ಆಯೋಜಿಸಿದ್ದ ಭಜನಾ ಸಂಕೀರ್ತನೆಯಲ್ಲಿ ಸೋಮವಾರ ರಾತ್ರಿಯ ವೇಳೆ ಶಿವಧ್ಯಾನ ಗಮನ ಸೆಳೆಯಿತು. ರುದ್ರಭೂಮಿ ಮನುಷ್ಯನ ಮೋಕ್ಷ ಸ್ಥಳ,ಇಂತಹಾ ಪವಿತ್ರ ಸ್ಥಳ ಶಿವನ ಸಾನಿಧ್ಯವೂ ಇದೆ. ಈ ಬಗ್ಗೆ ಸಾಮಾಜಿಕ ಜಾಗೃತಿಯ ಕಾರಣಕ್ಕೆ ಶಿವರಾತ್ರಿಯಂದು ಭಜನೆಯ ಮೂಲಕ ಶಿವಾರಾಧನೆ ನಡೆಸಲಾಗಿದೆ. ದೇವಭೂಮಿಯೆಂದೇ ಹೆಸರಿಸಲಾದ ರುದ್ರಭೂಮಿಯಲ್ಲಿ ಶಿವ, ಸತ್ಯಹರಿಶ್ಚಂದ್ರನ ಮೂರ್ತಿ ಸಹಿತ ಇಡೀ ರುದ್ರಭೂಮಿಯನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
Be the first to comment on "ರುದ್ರಭೂಮಿಯಲ್ಲಿ ಭಜನೆ, ಸಂಕೀರ್ತನೆಗಳೊಂದಿಗೆ ಶಿವರಾತ್ರಿ ಆಚರಣೆ"