ಪುತ್ತೂರಿನ ಆನಂದಾಶ್ರಮ ಸೇವಾ ಟ್ರಸ್ಟ್ ಲಯನ್ಸ ಕ್ಲಬ್ ಮಾಣಿ,ಲಯನ್ಸ್ ಕ್ಲಬ್ ಬಂಟ್ವಾಳ, ಬಿ.ಎಮ್.ಎಸ್ ರಿಕ್ಷಾ ಚಾಲಕ ಮಾಲಕರ ಸಂಘ ಮಾಣಿ ,ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿ ಆಶ್ರಯದಲ್ಲಿ ಕಣ್ಣಿನ ಚಿಕಿತ್ಸೆ ಮತ್ತು ಕನ್ನಡಕ ವಿತರಣಾ ಕಾರ್ಯಕಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ ಮಾಣಿಯಲ್ಲಿ ಆಯೋಜಿಸಲಾಗಿತ್ತು.
ಆನಂದಾಶ್ರಮ ಸೇವಾ ಟ್ರಸ್ಟ್ (ರಿ) ಪುತ್ತೂರು ಅಧ್ಯಕ್ಷೆ ಡಾ.ಗೌರಿ ಪೈ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಮಾಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಶಿಕಲಾ ,ಲಯನ್ಸ್ ಕ್ಲಬ್ ಮಾಣಿ ಅಧ್ಯಕ್ಷ ಗಂಗಾಧರ ರೈ ಪಿ,, ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಸುಧಾಕರ ಆಚಾರ್ಯ,ವಿಧ್ಯಾವರ್ಧಕ ಸಂಘ ಮಾಣಿ ಅಧ್ಯಕ್ಷ ಕಿರಣ್ ಹೆಗ್ಡೆ, ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಬಿ.ಯಂ.ಎಸ್ .ರಿಕ್ಷಾ ಚಾಲಕ ಮಾಲಕ ಸಂಘ ಮಾಣಿ ಕಾನೂನು ಸಲಹೆಗಾರ ಉಮೇಶ್ ಕುಮಾರ್ ವೈ, ಮಾಣಿ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಗಣೇಶ ಪೂಜಾರಿ ಬಂಟ್ರಿಂಜ, ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಎಸ್ ಶೆಟ್ಟಿ, ಡಾ. ಶ್ರೀನಾಥ್ ಆಳ್ವ ಪದ್ಮ ಕ್ಲೀನಿಕ್ ಮಾಣಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ಕೆ.ಮಾಣಿ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ ಉಪಸ್ಥಿತರಿದ್ದರು.
ಆನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು ವತಿಯಿಂದ ಶಿಭಿರಾರ್ಥಿಗಳಿಗೆ ಸ್ಥಳದಲ್ಲೆ ಕನ್ನಡಕ ವಿತರಿಸಲಾಯಿತು. ಡಾ.ಎ. ಮನೋಹರ .ರೈ ಶಿಬಿರದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಡಾ.ಗೌರಿ ಪೈ ಅವರನ್ನು ಗೌರವಿಸಲಾಯಿತು. ಉಮೇಶ್.ಪಿ .ಬರಿಮಾರು ಕಾರ್ಯಕ್ರಮ ನಿರ್ವಹಿಸಿದರು.
Be the first to comment on "ಮಾಣಿಯಲ್ಲಿ ಉಚಿತ ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ"