ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಭೂ ಕೈಲಾಸ ಪ್ರತೀತಿಯ ಬಂಟ್ವಾಳ ತಾಲೂಕು ಕಾರಿಂಜ ಮಹತೋಭಾರ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಸೋಮವಾರ ಸಂಭ್ರಮದ ಮಹಾಶಿವರಾತ್ರಿ ಜಾಗರಣೆಯ ವಿಶೇಷ ಕಾರ್ಯಕ್ರಮಗಳು ನಡೆಯಿತು.
ಬೆಳಗ್ಗೆ ದರ್ಶನ ಬಲಿ, ಕಂಚು ಬೆಳಕು ಸೇವೆಗಳು, ಸಂಜೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ಉತ್ಸವ, ಶ್ರೀ ಕಾರಿಂಜೇಶ್ವರ ಸನ್ನಿಧಿಯಲ್ಲಿ ಏಕಾದಶ ರುದ್ರಾಭಿಷೇಕ, ರಾತ್ರಿ ತುಲಾಭಾರ ಸೇವೆ , ರಂಗಪೂಜೆ, ಶತರುದ್ರಾಭಿಷೇಕ,ಭಜನೆ ನಡೆಯಿತು. ಸಾವಿರಾರು ಭಕ್ತರು ಪಾರ್ವತಿ ಪರಮೇಶ್ವರ ದೇವರ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದರು.
ಮಾ.5ರಂದು ಚಂದ್ರ ಮಂಡಲ ಉತ್ಸವ,ಬೆಳಗ್ಗೆ ಶ್ರೀ ಪಾರ್ವತಿ ಸನ್ನಿಧಿಯಲ್ಲಿ ದರ್ಶನಬಲಿ, ಮಧ್ಯಾಹ್ನ ಮಹಪೂಜೆ,ಅನ್ನಸಂತರ್ಪಣೆ, ರಾತ್ರಿ ಬಲ್ಲೋಡಿ ಮಾಗಣೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಆಗಮನ, ಪಾರ್ವತಿ-ಪರಮೇಶ್ವರ ದೇವರ ಭೇಟಿ, ಬೆಳಗ್ಗೆ ಶಯನೋತ್ಸವ ಕವಾಟ ಬಂಧನ ಕಾರ್ಯಕ್ರಮಗಳು ನಡೆಯಲಿದೆ.
Be the first to comment on "ಕಾರಿಂಜೇಶ್ವರ ದೇವಸ್ಥಾನದಲ್ಲಿ ಸಂಭ್ರಮದ ಮಹಾಶಿವರಾತ್ರಿ ಆಚರಣೆ"