ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಚೆನ್ನೈತ್ತೋಡಿ ಪಂಚಾಯತ್ ವ್ಯಾಪ್ತಿಯ ಮಾವಿನಕಟ್ಟೆಯಲ್ಲಿ ಕಮಲ ಜ್ಯೋತಿ ಅಭಿಯಾನ ನಡೆಯಿತು.ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಈ ಸಂದರ್ಭ ಮಾತನಾಡಿ, ಸರ್ವರಿಗೆ ಸಮಪಾಲು ಸರ್ವರಿಗೆ ಸಮ ಬಾಳು ಕಲ್ಪನೆಯ ಕೇಂದ್ರ ಸರ್ಕಾರದ ಸಂಕಲ್ಪವನ್ನು ಜಾರಿಗೊಳಿಸುವ ವಿಚಾರ ಹಾಗೂ ಕೇಂದ್ರ ಹಮ್ಮಿಕೊಂಡ ವಿವಿಧ ಕಾರ್ಯಯೋಜನೆಗಳನ್ನು ಜನರಿಗೆ ತಿಳಿಸುವ ಕಾರ್ಯವಾಗಬೇಕು ಎಂದರು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಅಧಿಕಾರ ಅವಧಿಯಲ್ಲಿ ಸುಮಾರು ೧೫೩ ವಿವಿಧ ಜನಪರ ಯೋಜನೆಗಳು ಮತ್ತು ಐತಿಹಾಸಿಕ ತಿರ್ಮಾನಗಳನ್ನು ಸಕಾರಗೊಳಿಸಿ ಭವಿಷ್ಯದಲ್ಲಿ ಪ್ರತಿಯೊಬ್ಬ ಪ್ರಜೆಯು ತನ್ನ ಬದುಕಿನಲ್ಲಿ ನಿಟ್ಟುಸಿರು ಬಿಟ್ಟು ಜೀವನ ಸಾಗಿಸುವಂತೆ ಮಾಡಿದೆ ಎಂದರು.
ನಂತರ ಮೋದಿ ಅಭಿಮಾನಿ ಬಳಗದಿಂದ ಯಕ್ಷಗಾನ ನಡಿಯಿತು. ಮೋದಿ ಟೀ ಸ್ಟಾಲ್ ಅನ್ನು ಶಾಸಕರಾದ ರಾಜೇಶ್ ನಾಯ್ಕ್, ಹಾಗೂ ಕ್ಷೇತ್ರದ ಅಧ್ಯಕ್ಷರಾದ ದೇವದಾಸ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯರಾರ ತುಂಗಪ್ಪ ಬಂಗೇರ ಉದ್ಘಾಟಿಸಿದರು. ಚಿದಾನಂದ ಮೋದಿ ಚಿತ್ರ ಬಿಡಿಸಿದರು. ರಾಜ್ಯ ಸಹವಕ್ತಾರೆಯಾದ ಸುಲೋಚನಾ ಜಿ.ಕೆ ಭಟ್ ಸ್ವಾಗತಿಸಿ ವಂದಿಸಿದರು, ಜಿಲ್ಲಾ ವಕ್ತಾರರಾದ ಹರಿಕೃಷ್ಣ ಬಂಟ್ವಾಳ, ತಾಲೂಕು ಪಂ ಸದಸ್ಯರಾದ ಪ್ರಭಾಕರ್ ಪ್ರಭು, ರಮೇಶ್ ಕುಡ್ಮೇರು, ಸಂಗಬೆಟ್ಟು ಶಕ್ತಿಕೇಂದ್ರ ಅಧ್ಯಕ್ಷರಾದ ರತ್ನಕುಮಾರ್ ಚೌಟ, ಕ್ಷೇತ್ರದ ಉಪಾಧ್ಯಕ್ಷರಾದ ವಿಜಯ ರೈ, ಹಾಗೂ ಕೃಷ್ಣ ಅಲಿಯಾಸ್ ಮೋದಿ ಭಟ್ ಉಡುಪಿ, ಮಂಡಲದ ಪ್ರ.ಕಾರ್ಯದರ್ಶಿಯಾದ ಚಂದ್ರಶೇಖರ ಶೆಟ್ಟಿ, ಪ್ರಮುಖರಾದ ಶೇಖರ್ ಮತ್ತು ಜಗದೀಶ ಶೆಟ್ಟಿ ಉಪಸ್ಥಿತರಿದ್ದರು.
ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
Be the first to comment on "ಮಾವಿನಕಟ್ಟೆಯಲ್ಲಿ ಬಿಜೆಪಿಯಿಂದ ಕಮಲಜ್ಯೋತಿ ಅಭಿಯಾನ"