ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ಆಧಾರ್ ಕಾರ್ಡ್‌ನಲ್ಲಿ ಗರಿಷ್ಟ ಮೂರು ವರ್ಷಗಳಿಗಿಂತಲೂ ಹೆಚ್ಚಿಗೆ ವ್ಯತ್ಯಾಸವಿದ್ದಲ್ಲಿ ತಿದ್ದುಪಡಿಯಾಗದೆ ತಿರಸ್ಕೃತವಾಗುತ್ತಿರುವ ವಿಚಾರದಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಬೀಡಿ ಸಹಿತ ವಿವಿಧ ಕ್ಷೇತ್ರಗಳಲ್ಲಿರುವ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸಬೇಕು ಎಂದವರು ಒತ್ತಾಯಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಯು.ಐ.ಡಿ.ಎ.ಐ. ರೀಜನಲ್ ಆಫೀಸ್ ಪ್ರಾದೇಶಿಕ ನಿರ್ದೇಶಕರು ಮತ್ತು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಎಷ್ಟೇ ವ್ಯತ್ಯಾಸ ಇದ್ದಲ್ಲಿ, ಪೂರಕ ದಾಖಲೆ ಮತ್ತು ಗಜೆಟ್ಟೆಡ್ ಅಧಿಕಾರಿಯವರ ಪರಿಶೀಲನ ಪತ್ರವಿದ್ದಲ್ಲಿ ಹತ್ತು ವರ್ಷಗಳ ವ್ಯತ್ಯಾಸ ಇದ್ದರೂ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಅನುಮತಿ ನೀಡಿ ಸೂಕ್ತವಾದ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದ್ದಾರೆ.
ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಎಷ್ಟೇ ವ್ಯತ್ಯಾಸ ಇದ್ದಲ್ಲಿ, ಪೂರಕ ದಾಖಲೆ ಮತ್ತು ಗಜೆಟ್ಟೆಡ್ ಅಧಿಕಾರಿಯವರ ಪರಿಶೀಲನ ಪತ್ರವಿದ್ದಲ್ಲಿ ಹತ್ತು ವರ್ಷಗಳ ವ್ಯತ್ಯಾಸ ಇದ್ದರೂ ಜನ್ಮ ದಿನಾಂಕ ತಿದ್ದುಪಡಿ ಮಾಡಲು ಅನುಮತಿ ನೀಡಿ ಸೂಕ್ತವಾದ ಆದೇಶ ಹೊರಡಿಸಬೇಕು ಎಂದು ಪ್ರಭು ಒತ್ತಾಯಿಸಿದ್ದಾರೆ.
Be the first to comment on "ಆಧಾರ್ ನಲ್ಲಿ ಜನ್ಮದಿನಾಂಕ ತಿದ್ದುಪಡಿ ಗೊಂದಲ: ಸರಿಪಡಿಸಲು ಮನವಿ"