ವಿಟ್ಲ: ಸಮಸ್ತ ಸಂಘಟನೆ ವತಿಯಿಂದ ಫೆ. 28ರಂದು ಕೇರಳದ ಕಲ್ಲಿಕೋಟೆಯಲ್ಲಿ ಸಿ.ಯಂ ಉಸ್ತಾದ್ ಅವರ ಹತ್ಯೆ ಪ್ರಕರಣವನ್ನು ಖಂಡಿಸಿ ನಡೆಯಲಿರುವ ಸಮಸ್ತ ಪ್ರತಿಭಟನಾ ಸಮಾವೇಶದ ಪ್ರಯುಕ್ತ ಪ್ರಚಾರ ಜಾಥ ವಿಟ್ಲಕ್ಕೆ ಆಗಮಿಸಿದೆ.
ವಿಟ್ಲ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ಮಸೀದಿ ಆಡಳಿತ ಸಮಿತಿ ವತಿಯಿಂದ ಸ್ವಾಗತಿಸಲಾಯಿತು. ಈ ಸಂದರ್ಭ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಹರ್ಶದೀಸ್ ಜಿಲ್ಲಾ ಉಪಾಧ್ಯಕ್ಷ ಹಸನ್ ಅರ್ಶದಿ ಅವರು ಸಿ.ಯಂ ಉಸ್ತಾದ್ ಅವರನ್ನು ಅಮಾನುಷ ರೀತಿಯಲ್ಲಿ ಕೊಲೆಗೈದು ಸಮುದ್ರ ಬದಿಯಲ್ಲಿ ಎಸೆಯಲಾಗಿದೆ. ಈ ಘಟನೆ ನಡೆದು ಹಲವು ವರ್ಷಗಳು ಕಳೆದರೂ ನ್ಯಾಯ ಸಿಕ್ಕಿಲ್ಲ. ತನಿಖೆ ಹಾದಿ ತಪ್ಪುತ್ತಿದೆ. ಆರೋಪಿಗಳನ್ನು ಪತ್ತೆ ಹಚ್ಚುವುದು ಕಾನೂನು ರಕ್ಷಕರ ಕರ್ತವ್ಯವಾಗಿದೆ. ಆದರೆ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ ಎಂದು ದೂರಿದರು. ಸಮಸ್ತ ಸಂಘಟನೆ ಇದರ ವಿರುದ್ಧ ನಿರಂತರ ಹೋರಾಟ ಹಮ್ಮಿಕೊಂಡಿದೆ. ಈ ಹಿನ್ನೆಲೆಯಲ್ಲಿ ಫೆ. ೨೮ರಂದು ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಹರ್ಶದೀಸ್ ಜಿಲ್ಲಾಧ್ಯಕ್ಷ ಖಲೀಲ್ ಅರ್ಶದಿ, ಶರೀಫ್ ಅರ್ಶದಿ, ಅಬ್ದುಲ್ ರಹಿಮಾನ್, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬು ಅಬ್ದುಲ್ ಸಲಾಂ ಲತೀಫಿ, ಆಡಳಿತ ಸಮಿತಿ ಅಧ್ಯಕ್ಷ ಇಬ್ರಾಹಿಂ ಏರ್ಸೌಂಡ್, ಅಬೂಬಕ್ಕರ್ ನೋಟರಿ ವಿಟ್ಲ, ಹಕೀಂ ಅರ್ಶದಿ ವಿಟ್ಲ, ಅಲ್ ಖೈರ್ ಶರೀಯತ್ ಮಹಿಳಾ ಕಾಲೇಜಿನ ಖಜಾಂಜಿ ಮುಸ್ತಾಫ ಖಲೀಲ್ ವಿಟ್ಲ, ಕಾರ್ಯದರ್ಶಿ ಸಫ್ವಾನ್ ಮಹಮ್ಮದ್ ವಿಟ್ಲ, ಖಲಂದರ್ ಪರ್ತಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
Be the first to comment on "ಸಮಸ್ತ ಪ್ರತಿಭಟನಾ ಸಮಾವೇಶ: ಪ್ರಚಾರ ಜಾಥಾ ವಿಟ್ಲಕ್ಕೆ"