ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದರ ಅಷ್ಟಬಂಧ ಸಹಸ್ರಕುಂಭಾಭಿಷೇಕ ಮಾ.27 ರಿಂದ ಎ.1 ರವರೆಗೆ ನಡೆಯಲಿದೆ ಎಂದು ಕುರ್ನಾಡು ಶ್ರೀ ಸೋಮನಾಥೇಶ್ವರ ಕ್ಷೇತ್ರ ಸಂಚಾಲಕ ಜಯರಾಮ ಶಾಂತ ಹೇಳಿದರು.
ಅವರು ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಕಾರ್ಯಕ್ರಮಗಳ ವಿವರ ನೀಡಿದರು. ಮಾ.27 ರಂದು ವೈದಿಕ ಕಾರ್ಯಕ್ರಮಗಳಿಗೆ ದೇವಸ್ಥಾನದ ಮುಖ್ಯ ಸಲಹೆಗಾರ ರಘುರಾಮ ತಂತ್ರಿ ಚಾಲನೆ ನೀಡಲಿದ್ದಾರೆ. ಸಂಜೆ ಕುರ್ನಾಡುಗುತ್ತು ಎಚ್.ರಾಮಯ್ಯ ನಾಯ್ಕ್ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ ಶ್ರೀ ದತ್ತಾತ್ರೇಯ ಯಕ್ಷಗಾನ ಮತ್ತು ಭಜನಾ ಮಂಡಳಿ ಕುರ್ನಾಡು ಇವರಿಂದ ರತಿ ಕಲ್ಯಾಣ ಯಕ್ಷಗಾನ ಬಯಲಾಟ ಮಾ.28 ರಂದು ಗಣಪತಿ ಹೋಮ, ಅಂಕುರ ಪೂಜೆ, ಬಿಂಬಶುದ್ಧಿ ಕಲಶಪೂಜೆ, ಪ್ರಾಯಶ್ಚಿತ್ತ ಹೋಮ, ಪ್ರೋಕ್ತ ಹೋಮ, ಹೋಮಕಲಶಾಭಿಷೇಕ ರಾತ್ರಿ ಅಂಕುರ ಮತ್ತು ದುರ್ಗಾನಮಸ್ಕಾರ ಪೂಜೆ ನಡೆಯಲಿದೆ. ಸಂಜೆ ಸಾಂಸ್ಕೃತಿಕ ವೈಭವ, ಭಕ್ತಿಗೀತೆ ರಸಮಂಜರಿ, ಕದಂಬ ಕೌಶಿಕೆ ಯಕ್ಷಗಾನ ಬಯಲಾಟ ನಡೆಯಲಿದೆ.
ಮಾ.29 ರಂದು ವೈದಿಕ ಕಾರ್ಯಕ್ರಮ ಸಂಜೆ ಬಳಿಕ ಸಾಂಸ್ಕೃತಿಕ ವೈಭವ, ಮಾತೃಸಂಗಮ ಧಾರ್ಮಿಕ ಸಭೆಯಲ್ಲಿ ಜಿ.ಪಂ ಸದಸ್ಯೆ ಮಮತಾ ಗಟ್ಟಿ, ಬನ್ನಂಪಳ್ಳಿ ಪ್ರತಿಭಾ ಬಾಲಕೃಷ್ಣ ನಾಯ್ಕ್, ನ್ಯಾಯವಾದಿ ಸಹನಾ ಕುಂದರ್ ಸೂಡ, ಎನ್‍ಐಟಿಕೆ ಪ್ರೊ. ಡಾ| ಸುಪ್ರಭಾ ಕೆ.ಆರ್, ಎಂ ಆರ್ ಪಿಎಲ್ ನ ಮಾನವ ಸಂಪನ್ಮೂಲ ಅಧಿಕಾರಿ ಲಕ್ಷ್ಮೀ ಎಂ.ಕುಮಾರನ್, ಆಸರೆ ಟ್ರಸ್ಟಿನ ಆಶಾಜ್ಯೋತಿ ರೈ ಮುಂತಾದವರು ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಣ್ಯಭೂಮಿ ಭಾರತ ನುಡಿ,ನಾದ, ನಾಟ್ಯ, ಮಸ್ಕಿರಿ ಕುಡ್ಲ ಇವರಿಂದ ತೆಲಿಕೆ ಬಂಜಿ ನಿಲಿಕೆ ನಡೆಯಲಿದೆ. ಮಾ.30 ರಂದು ವೈದಿಕ ಕಾರ್ಯಕ್ರಮಗಳು ಸಂಜೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ವೈಭವ, ಧಾರ್ಮಿಕ ಸಭೆಯಲ್ಲಿ ಎ.ಸಿ ಭಂಡಾರಿ, ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ದೇವು ಮೂಲ್ಯಣ್ಣ, ಬ್ರಹ್ಮಶ್ರೀ ನೀಲೇಶ್ವರ ಉಚಿಲತ್ತಾಯ ಪದ್ಮನಾಭ ತಂತ್ರಿಗಳಿಂದ ಧಾರ್ಮಿಕ ಉಪನ್ಯಾಸ, ಡಾ.ಎಚ್. ಬಾಲಕೃಷ್ಣ ನಾಯ್ಕ್ ಕುರ್ನಾಡುಗುತ್ತು, ವೆಂಕಪ್ಪ ಕಾಜವ ಮಿತ್ತಕೋಡಿ, ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ನಗ್ರಿಗುತ್ತು ಮುಂತಾದವರು ಭಾಗವಹಿಸಲಿದ್ದಾರೆ. ಮಾ.31 ರಂದು ವೈದಿಕ ಕಾರ್ಯಕ್ರಮಗಳು ಬಳಿಕ ಶಿವಭಕ್ತ ಮಾರ್ಕಾಂಡೇಯ ಹರಿಕಥೆ, ಮಧ್ಯಾಹ್ನ ಪಟ್ಲ ಸತೀಶ್ ಶೆಟ್ಟಿ ಮತ್ತು ಬಳಗದಿಂದ ಯಕ್ಷ-ನಾಟ್ಯ-ವೈಭವ, ನಡೆಯಲಿದೆ. ಧಾರ್ಮಿಕ ಸಭೆಯಲ್ಲಿ ಮುಂಬೈ ಕಸ್ಟಂ ನ ಅಸಿಸ್ಟೆಂಟ್ ಕಮೀಷನರ್ ರೋಹಿತ್ ಹೆಗ್ಡೆ ಎರ್ಮಾಳು, ಸೋಮೇಶ್ವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಪತ್ರಕರ್ತ ಶ್ರೀಕಾಂತ ಶೆಟ್ಟಿ ಕಾರ್ಕಳ, ಮಾಜಿ ಸಚಿವ ರಮಾನಾಥ ರೈ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಬಂಟರ ಮಾತೃಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಂಜೆ ಪದ್ಮಶ್ರೀ ಡಾ. ಕದ್ರಿ ಗೋಪಲನಾಥ್ ಮತ್ತು ಸುರಮಣಿ ಪಂಡಿತ್ ಪ್ರವೀಣ್ ಗೋಡ್ಖಂಡಿ ಇವರಿಂದ ಸ್ಯಾಕ್ಸೋಫೋನ್ ಮತ್ತು ಬಾನ್ಸುರಿ ಜುಗಲ್ ಬಂಧಿ ನಡೆಯಲಿದೆ. ಎ.1 ರಂದು ಅಷ್ಟಬಂಧ ಲೇಪನ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಸಂಜೆ ಶ್ರೀಭೂತ ಬಲಿ, ನೃತ್ಯ ಬಲಿ, ಬಟ್ಟಲು ಕಾಣಿಕೆ, ಮಂತ್ರಾಕ್ಷತೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕೊಳಲು ಸಂಗೀತ ವಿದ್ಯಾಲಯ ಇರಾ ಮುಡಿಪುವಿನ ವಿದ್ಯಾರ್ಥಿಗಳಿಂದ ನಾದತರಂಗ, ಭೀಷ್ಮ ವಿಜಯ ಯಕ್ಷಗಾನ ತಾಳಮದ್ದಳೆಯಲ್ಲಿ ಭಾಗವತರಾಗಿ ಸತೀಶ್ ಶೆಟ್ಟಿ ಪಟ್ಲ, ಗಿರೀಶ್ ರೈ ಕಕ್ಕೆಪದವು, ಡಾ ಪ್ರಖ್ಯಾತ್ ಶೆಟ್ಟಿ ಅಳಿಕೆ ಭಾಗವಹಿಸಲಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದೇವಿಪ್ರಸಾದ್ ಶೆಟ್ಟಿ ಕಲ್ಲಾಡಿ, ಕದ್ರಿ ನವನೀತ ಶೆಟ್ಟಿ ಮುಂತಾದವರು ಭಾಗವಹಿಸಲಿದ್ದಾರೆ.
ಕ್ಷೇತ್ರದ ಆಡಳಿತ ಮೊಕ್ತೇಸರ, ಗೌರವ ಸಲಹೆಗಾರ ಸುದರ್ಶನ ಶೆಟ್ಟಿ, ಜೀರ್ಣೋದ್ಧರ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಕಾಜವ, ತಂತ್ರಿಗಳಾದ ರಘುರಾಮ ತಂತ್ರಿ, ಪ್ರಧಾನ ಅರ್ಚಕ ಹರಿ ಭಟ್, ಜಿ.ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶಿವಶಂಕರ ಭಟ್ ಕಾಡಿಮಾರು, ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಫಜೀರುಗುತ್ತು, ಪ್ರಧಾನ ಕಾರ್ದರ್ಶಿ ಕೆ.ಆರ್.ಗಟ್ಟಿ ಕೊರಂತೋಡಿ, ಮಹಿಳಾ ಸಮಿತಿ ಅಧ್ಯಕ್ಷೆ ಡಾ.ಸುರೇಖಾ ಅಮರನಾಥ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಗಣೇಶ ನಾಯ್ಕ ಕುರ್ನಾಡುಗುತ್ತು, ಜೀರ್ಣೋದ್ಧರ ಸಮಿತಿ ಗೌರವಾಧ್ಯಕ್ಷ ವೆಂಕಪ್ಪ ಕಾಜವ, ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಪ್ರದೀಪ ಆಳ್ವ ಅಜೆಕಳಗುತ್ತು , ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ನರಸಿಂಹ ಹೆಗ್ಡೆ ಉಪಸ್ಥಿತರಿದ್ದರು.
ಕ್ಷೇತ್ರ ಇತಿಹಾಸ: ಮಾ.28 1994 ರಲ್ಲಿ ದಿ| ಬ್ರಹ್ಮಶ್ರೀ ನೀಲೇಶ್ವರ ತಂತ್ರಿ ಹಾಗೂ ಆಡಳಿತ ಮೊಕ್ತೇಸರ ದಿ| ರಾಮಯ್ಯ ನಾಯ್ಕ್ ರವರ ನೇತೃತ್ವದಲ್ಲಿ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆದಿತ್ತು. ದೇವಸ್ಥಾನದ ಶಿಲಾಶಾಸನ ಮತ್ತು ಪುತ್ತಿಗೆ ಸೋಮನಾಥೇಶ್ವರ ದಾಖಲೆಗಳ ಪ್ರಕಾರ ಕ್ಷೇತ್ರಕ್ಕೆ 1000 ವರ್ಷಗಳ ಇತಿಹಾಸವಿದೆ. ಕುಂಡಲೀ ಮುನಿಗಳು ಕುಂಡಲಿ ಪರ್ವತದಲ್ಲಿ ದೇವಸ್ಥಾನ ಪ್ರತಿಷ್ಠಾಪಿಸಿದರು. ಕಾಲಾನುಸಾರ ಕುಂಡಲೀ ನಾಡಾಗಿ ಕ್ರಮೇಣ ಕುರ್ನಾಡು ಹೆಸರು ಊರಿಗೆ ಬಂದಿದೆ. ಇತಿಹಾಸದ ಪ್ರಕಾರ ಚೌಟರಸರ ಕಾಲದಲ್ಲಿ ಸೋಮಕ್ಕ ಎಂಬ ಮಹಿಳೆ ಸೊಪ್ಪು ಕಡಿಯುವಾಗ ಕಲ್ಲಿಗೆ ಕತ್ತಿ ತಾಗಿದಾಗ ಕಲ್ಲಿನಿಂದ ರಕ್ತ ಸುರಿದಿದೆ. ಇಲ್ಲಿನ ಶಕ್ತಿ ಮನಗಂಡು ಚೌಟರಸ ತಿರುಮಲರಾಯ ಅದೇ ಕಲ್ಲನ್ನು ಶಿಲ್ಪಿಗಳಿಂದ ಕೆತ್ತಿಸಿ ಶಿವನಮೂರ್ತಿ ಇಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬ ನಂಬಿಕೆ ಇಲ್ಲಿನದ್ದಾಗಿದೆ. ದೇವರ ರಕ್ಷಕ ಗ್ರಹದೈವದ ಸನ್ನಿಧಾನ ಕ್ಷೇತ್ರದ ಈಶಾನ್ಯದಲ್ಲಿರುವುದರಿಂದ ಮೂರ್ಛೆ ರೋಗ ಅಥವಾ ಫಿಟ್ಸ್ ರೋಗ ಗುಣಮುಖವಾಗಲು ಪ್ರಾರ್ಥನೆ ನಡೆಸಿದರೆ ರೋಗ ಗುಣವಾಗಿರುವ ಉದಾಹರಣೆಗಳಿವೆ.
Be the first to comment on "ಮಾ.27 ರಿಂದ ಎ.1ರವರೆಗೆ ಕುರ್ನಾಡು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಸಹಸ್ರಕುಂಭಾಭಿಷೇಕ"