ಬಂಟ್ವಾಳ: ಪಡಿ ಸಂಸ್ಥೆ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಕಾವಳಪಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ಆಲಂಪುರಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ ” ಶಾಲಾ ಅಭಿವೃದ್ಧಿ ಯೋಜನೆ ತಯಾರಿ” ಕುರಿತು ತರಬೇತಿ ಕಾರ್ಯಗಾರ ನಡೆಯಿತು.
ಪಡಿ ಸಂಸ್ಥೆಯ ತರಬೇತುದಾರ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಲೆಯಲ್ಲಿರಬೇಕಾದ ಮೂಲಭೂತ ಸೌಲಭ್ಯಗಳು, ಸಮುದಾಯದ ಸಹಭಾಗಿತ್ವದೊಂದಿಗೆ ನಡೆಸಬಹುದಾದ ಚಟುವಟಿಕೆಗಳು, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ತಂತ್ರಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕುಂದುಕೊರತೆಗಳ ನಿವಾರಣೆ ಮೊದಲಾದ ವಿಷಯಗಳಲ್ಲಿ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ರೋಸಿ ಎಂ.ಫೆರ್ನಾಂಡೀಸ್, ಸಹಶಿಕ್ಷಕರು, ಶಾಲಾಭಿವೃದ್ಧಿ ಸದಸ್ಯರು ಹಾಜರಿದ್ದರು.
Be the first to comment on "ಆಲಂಪುರಿ: ಶಾಲಾ ಅಭಿವೃದ್ಧಿ ಯೋಜನೆ ತರಬೇತಿ"