ಬಂಟ್ವಾಳ ತಾಲೂಕು ಮಟ್ಟದ ಶಿವಾಜಿ ಜಯಂತಿ ಆಚರಣೆ ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ತಾಲೂಕು ಮಟ್ಟದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಮಂಗಳವಾರ ನಡೆಯಿತು.
ಶಿವಾಜಿ ಜೀವನ ಸಾಧನೆ ನಮ್ಮ ಜೀವನಕ್ಕೆ ಸ್ಪೂರ್ತಿಯಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ಉಪತಹಶೀಲ್ದಾರ್ ರಾಜೇಶ್ ನಾಯ್ಕ್ ಹೇಳಿದರು. ಧೈರ್ಯ ಸಹನೆ ಮುಂತಾದ ಆಧ್ಯಾತ್ಮಿಕ ಗುಣಗಳ ಬಲದಲ್ಲಿ ರಾಜ್ಯ ಸ್ಥಾಪನೆ ಮಾಡಿದ ಶಿವಾಜಿ ಮರಾಠರಲ್ಲಿ ಧೈರ್ಯ ತುಂಬಿ ಆದರ್ಶ ರಾಜನಾದನು, ಶಕ್ತಿ ಮತ್ತು ಯುಕ್ತಿಗಳು ಇದ್ದಲ್ಲಿ ವಿರೋಧಿಗಳು ಪ್ರಬಲರಾಗಿದ್ದರೂ ಧೈರ್ಯದಿಂದ ಎದುರಿಸಿ
ಸೋಲಿಸ ಬಹುದೆಂಬುವುದಕ್ಕೆ ಛತ್ರಪತಿ ಶಿವಾಜಿ ಮಾದರಿಯಾಗಿದ್ದಾರೆ ಎಂದು ಅವರು ಹೇಳಿದರು.
ಪ್ರಥಮ ದರ್ಜೆ ಸಹಾಯಕ ಪ್ರಸನ್ನ ಪಕ್ಕಳ ಶಿವಾಜಿಯವರ ಜೀವನ ಸಂದೇಶವನ್ನು ವಿವರಿಸಿದರು. ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶು ಕುಮಾರ್, ತಾಲೂಕು ಕಚೇರಿ ಸಿಬಂದಿ, ಗ್ರಾಮ ಕರಣಿಕರು, ಗ್ರಾಮ ಸಹಾಯಕರು, ಸಾರ್ವಜನಿಕರು ಉಪಸ್ಥಿತರಿದ್ದರು, ತಾಲೂಕು ಆಡಳಿತ ಶಾಖೆಯ ಸೀತಾರಾಮ ಕಮ್ಮಾಜೆ ಸ್ವಾಗತಿಸಿ, ದ್ವಿತೀಯ ದರ್ಜೆ ಸಹಾಯಕಿ ಶ್ವೇತ ವಂದಿಸಿದರು.
Be the first to comment on "ಬಂಟ್ವಾಳ ತಾಲೂಕು ಮಟ್ಟದ ಶಿವಾಜಿ ಜಯಂತಿ ಆಚರಣೆ"