ಲಕ್ಷಾಂತರ ಜನರ ಬದುಕು ಬದಲಾಯಿಸಿದ ಧರ್ಮಸ್ಥಳ – ಸಿಎಂ ಕುಮಾರಸ್ವಾಮಿ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಧರ್ಮಸ್ಥಳವೆಂದದರೆ ಕೇವಲ ಹೆಸರಲ್ಲ, ಅದು ಪವಿತ್ರವಾದ ಸನ್ನಿಧಿ. ಇಲ್ಲಿ  ಹಿಂದೆ ನಾನು ಯಾವುದೋ ಕಾರಣಕ್ಕೆ ಕ್ಷೇತ್ರದ ಹೆಸರನ್ನು ಉಲ್ಲೇಖಿಸಬಾರದಾಗಿತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಭೇಟಿ ನೀಡಿದ ಸಿಎಂ ಎಚ್‌ಡಿ ಕುಮಾರಸ್ವಾಮಿ, ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ಚತುಷ್ಪಥ ರಸ್ತೆ ಪ್ರಥಮ ಹಂತದ ಉದ್ಘಾಟನೆ ಹಾಗೂ ಕೆರೆ ಸಂಜೀವಿನಿ ಕಾರ್ಯಕ್ರಮದ ಒಡಂಬಡಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಧರ್ಮಾಧಿಕಾರಿಗಳಾಗಿ ವೀರೇಂದ್ರ ಹೆಗ್ಗಡೆ ಕೈಗೊಂಡಿರುವ ಅನೇಕ ಕಾರ್ಯಕ್ರಮಗಳಿಂದ ಇಂದು ಲಕ್ಷಾಂತರ ಜನರ ಬದುಕನ್ನು ಬದಲಿಸಿದೆ. ಸಾವಿರಾರು ಗ್ರಾಮಗಳ ಪುನಶ್ಚೇತನವಾಗಿದೆ. ಸಮಾಜ ಕಟ್ಟುವ ಅವರ ಕಾಯಕದಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಜನರು ದುಶ್ಚಟಗಳಿಂದ ವಿಮುಖರಾಗಿದ್ದಾರೆ ಎಂದು ಅವರು ಹೇಳಿದರು.

ಬಳಿಕ ಮಾತನಾಡಿದ ಅವರು, ಸಮಸ್ತ ಕನ್ನಡಿಗರಿಗೆ ಧರ್ಮಸ್ಥಳದ ದೈವಶಕ್ತಿಯಲ್ಲಿ, ಧರ್ಮಸ್ಥಳದ ನ್ಯಾಯಪೀಠದಲ್ಲಿ ಅನನ್ಯವಾದ ನಂಬಿಕೆ ಇದೆ. ತಮ್ಮ ಧಾರ್ಮಿಕ ನಂಬಿಕೆ, ದೈನಂದಿನ ಬದುಕು ಮತ್ತು ಜೀವನ ಮಾರ್ಗಗಳನ್ನು ಧರ್ಮಸ್ಥಳದ ಮಂಜುನಾಥನ ಸುತ್ತಲೇ ಹೆಣೆದುಕೊಂಡು ಬಂದವರು ನಾವು. ನಮಗೆ ಧರ್ಮಸ್ಥಳ ಎಂಬುದೊಂದು ಕೇವಲ ಸ್ಥಳದ ಹೆಸರಲ್ಲ. ಅದೊಂದು ಪರಂಪರಾಗತ ದೈವೀಕ ಸಂಕೇತ ಮತ್ತು ವಿಶ್ವಾಸ ಎಂದರು. 

ಕನ್ನಡ ಸಂಸ್ಕೃತಿ ಮತ್ತು ಜೈನಧರ್ಮದ ಸಂಬಂಧ ಹಾಲು ಜೇನಿನಂತಹುದು. ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದ ಕರ್ತೃವಾದ ಶ್ರೀ ವಿಜಯನಿಂದ ಮೊದಲ್ಗೊಂಡು ಕನ್ನಡ ಸಾಹಿತ್ಯದ ರತ್ನತ್ರಯರ ಆದಿಯಾಗಿ ಜಿನಸೇನಾಚಾರ್ಯ, ಸಮಂತಭದ್ರ, ಶಿವಕೋಟ್ಯಾಚಾರ್ಯ, ನಾಗವರ್ಮ ಮೊದಲಾದ ಸಾಹಿತ್ಯ ದಿಗ್ಗಜರಂತೆಯೇ ಕನ್ನಡದ ಶಿಲ್ಪಕಲೆ, ಸಮಾಜ ಜೀವನ ಮತ್ತು ಇತಿಹಾಸದ ಸುವರ್ಣ ಪುಟಗಳಲ್ಲಿ ತಮ್ಮ ಛಾಪು ಮೂಡಿಸಿದ ಜೈನ ಸಾಧಕರ ಪರಂಪರೆಯೇ ಕನ್ನಡ ಸಂಸ್ಕೃತಿಯ ಭಾಗವಾಗಿದೆ. ದಾನ ಚಿಂತಾಮಣಿ ಅತ್ತಿಮಬ್ಬೆ ಯಂತಹ ಮಹಾನ್ ಸಾಹಿತ್ಯ ಪೋಷಕಿಯನ್ನು ಮರೆಯುವುದಾದರೂ ಹೇಗೆ ? ಈ ಶ್ರೀಮಂತ ಸಮೃದ್ಧ ಮತ್ತು ಸಂಪನ್ನ ಪರಂಪರೆಯ ಮುಂದುವರಿಕೆಯೇ ಧರ್ಮಸ್ಥಳ ಎಂದು ಕುಮಾರಸ್ವಾಮಿ ತಿಳಿಸಿದರು.

ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮೊದಲ ಬಾರಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಶ್ರೀ ವಿರೇಂದ್ರ ಹೆಗಡೆಯವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಕೈಗೊಂಡಿರುವ ಕೆರೆಗಳ ಕಾಯಕಲ್ಪ ಯೋಜನೆ ಅವರ ಮೊದಲ ಯೋಜನೆಯಂತೆಯೇ ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಕನಸನ್ನು ನನಸು ಮಾಡುತ್ತದೆ ಎಂದು ಅಚಲ ನಂಬಿಕೆ. ಏಕೆಂದರೆ ಧರ್ಮಸ್ಥಳದ ಕತೃತ್ವ ಶಕ್ತಿಗೆ ಮತ್ತು ತನ್ನ ಯೋಜನೆಗಳನ್ನು ಅದು ಅನುಷ್ಠಾನಗೊಳಿಸುವ ರೀತಿಗೆ ಸರಿಸಾಟಿ ಇಲ್ಲ ಎಂದರು.

ಧರ್ಮಸ್ಥಳ ದೇಶದ ಅತ್ಯಂತ ಸ್ವಚ್ಛ ಧಾರ್ಮಿಕ ಕೇಂದ್ರ ಎಂಬ ಪ್ರಶಸ್ತಿಗೆ ಪಾತ್ರವಾಗಿರುವುದಕ್ಕೆ ಶ್ರೀ ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿಯ ಕ್ರಮಗಳೇ ಕಾರಣವಾಗಿದೆ. ನಾಡಿನಾದ್ಯಂತ ಉತ್ತಮ ಗುಣಮಟ್ಟದ ಯೋಗ, ನೈತಿಕ ಶಿಕ್ಷಣ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಆಡಳಿತ ಶಿಕ್ಷಣ, ವೈದ್ಯಕೀಯ ಹಾಗೂ ಕಾನೂನು ಕಾಲೇಜುಗಳನ್ನು ನಡೆಸುತ್ತಾ ಬಂದಿರುವ ವೀರೇಂದ್ರ ಹೆಗ್ಗಡೆಯವರ ಪ್ರಸ್ತಾಪಿತ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾನಿಲಯಕ್ಕೆ ನಮ್ಮ ಸರ್ಕಾರ ಅನುಮತಿ ನೀಡಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ದುಶ್ಚಟ ಮುಕ್ತ ಸಮಾಜವೊಂದನ್ನು ನಿರ್ಮಿಸುವ ನಿಟ್ಟಿನಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಕೈಗೊಂಡಿರುವ ಬಹುಮುಖ್ಯ ಕಾರ್ಯಕ್ರಮ ಜನಜಾಗೃತಿಯ ಮುಖೇನ ಸಮಾಜದಲ್ಲಿ ಮುಖ್ಯವಾಗಿ ದುರ್ಬಲ ವರ್ಗದಲ್ಲಿ ದುಶ್ಚಟಗಳಿಂದ ಉಂಟಾಗುವ ಅನಾಹುತಗಳ ಬಗ್ಗೆ ಅರಿವು ಮೂಡಿಸಲಾಗುತ್ತಿರುವುದು ಅತ್ಯಂತ ಸಾರ್ಥಕವಾದ ಕಾರ್ಯ ಎಂದರು.

ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮೊದಲ ಬಾರಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಿರೇಂದ್ರ ಹೆಗಡೆ ಅವರು ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆ ಇಂದು ಲಕ್ಷಾಂತರ ಕೃಷಿಕರ ಬಾಳಿನ ಬೆಳಕಾಗಿದೆ. ಈ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಅವರು ಕೈಗೊಂಡಿರುವ ಕೆರೆಗಳ ಕಾಯಕಲ್ಪ ಯೋಜನೆ ಅವರ ಮೊದಲ ಯೋಜನೆಯಂತೆಯೇ ಕರ್ನಾಟಕವನ್ನು ಜಲಸಮೃದ್ಧವನ್ನಾಗಿ ಮಾಡುವ ಕನಸನ್ನು ನನಸು ಮಾಡುತ್ತದೆ ಎಂದು ಅಚಲ ನಂಬಿಕೆ. ಏಕೆಂದರೆ ಧರ್ಮಸ್ಥಳದ ಕತೃತ್ವ ಶಕ್ತಿಗೆ ಮತ್ತು ತನ್ನ ಯೋಜನೆಗಳನ್ನು ಅದು ಅನುಷ್ಠಾನಗೊಳಿಸುವ ರೀತಿಗೆ ಸರಿಸಾಟಿ ಇಲ್ಲ ಎಂದು ಕುಮಾರ ಸ್ವಾಮಿ ಹೇಳಿದರು. 

ಕೇಂದ್ರ ಯೋಜನೆ ಮತ್ತು ಸಾಂಖಿಕ ಸಚಿವ ಡಿ.ವಿ. ಸದಾನಂದಗೌಡ, ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಚಿವ ಬಂಡೆಪ್ಪ ಕಾಶಂಪುರ್, ಶಾಸಕರಾದ ಹರೀಶ್ ಪೂಂಜ, ಹರೀಶ್ ಕುಮಾರ್  ಮತ್ತಿತರು ಪಾಲ್ಗೊಂಡಿದ್ದರು.

ಇದೇ ಸಂದರ್ಭ ಮಾತನಾಡಿದ ಡಾ. ಹೆಗ್ಗಡೆ, ಕುಮಾರಸ್ವಾಮಿ ಅವರ ಬಜೆಟ್ ರೈತಪರವಾಗಿರುವುದನ್ನು ಶ್ಲಾಘಿಸಿ, ಬಜೆಟ್ ಘೋಷಣೆಗಳಷ್ಟೇ ಅನುಷ್ಠಾನವೂ ಮುಖ್ಯ ಎಂದು ಹೇಳಿದರು.

About the Author

Harish Mambady
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಲಕ್ಷಾಂತರ ಜನರ ಬದುಕು ಬದಲಾಯಿಸಿದ ಧರ್ಮಸ್ಥಳ – ಸಿಎಂ ಕುಮಾರಸ್ವಾಮಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*