ರಕ್ತಸಂಬಂಧದಲ್ಲಿ ಮದುವೆಗಳಾದಾಗ ಉಂಟಾಗುವ ಸಮಸ್ಯೆಯೊಂದನ್ನು ಆಧರಿಸಿದ ಕಥಾವಸ್ತುವನ್ನು ಹೊಂದಿರುವ ಚಲನಚಿತ್ರದಲ್ಲಿ ಬಂಟ್ವಾಳದ ಯುವಕರು ಪ್ರಮುಖ ಪಾತ್ರದಲ್ಲಿದ್ದಾರೆ. ಹಲವಾರು ಭಾಷೆಗಳ ಸಿನಿಮಾಗಳಿಗೆ ಸಂಗೀತ ಸಂಯೋಜಕರಾಗಿರುವ
ಯುವ ಗಾಯಕ ನಕುಲ್ ಅಭ್ಯಂಕರ್ ರವರ ಸಂಗೀತವಿರುವ ಈ ಕಿರುಚಿತ್ರವು ಇದೇ ತಿಂಗಳ 15ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಬಿ.ಸಿ.ರೋಡಿನ ಛಾಯಾಗ್ರಾಹಕ ಶಕ್ತಿಪ್ರಸಾದ್ ಅಭ್ಯಂಕರ್ ತಿಳಿಸಿದ್ದಾರೆ.
ತುಮುಲ ಎಂಬ ಹೆಸರಿನ ಈ ಚಲನಚಿತ್ರದ ಮುಖ್ಯ ಪಾತ್ರದಲ್ಲಿ ಕೊಂಕಣಿ, ತುಳು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ನಟ ಸುಬ್ರಹ್ಮಣ್ಯ ಪೈ ನಟಿಸಿದ್ದಾರೆ. ಇವರೊಂದಿಗೆ ವಂದಿತಾ ಕುಡ್ವ, ಕೃತಿ ಕಾರಂತ್, ವೀಣಾ ಪಂಡಿತ್ ಶ್ರುತಿ ಸುವರ್ಣ ಮತ್ತು ಶಿವಶಂಕರ ಮಯ್ಯ ಅಭಿನಯಿಸಿದ್ದಾರೆ. ಪಡ್ಡಾಯಿ ಖ್ಯಾತಿಯ ಸದಾಶಿವ ನೀನಾಸಂ ನಿರ್ದೇಶನ ತಾಂತ್ರಿಕ ನಿರ್ವಹಣೆ ಬಾಲಸುಬ್ರಹ್ಮಣ್ಯ ನೂಜಿ, ಶಶಿಕುಮಾರ್ ಮತ್ತು ಸತೀಶ್ ಬಿ ವಹಿಸಿದ್ದಾರೆ. ಸಾಹಿತ್ಯ ಅನುಶ್ರೀ ಪುತ್ತೂರಾಯ ಅವರದ್ದು.
ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.
Be the first to commenton "ಬಂಟ್ವಾಳ ಯುವಕರಿಂದ ಜಾಗೃತಿ ಮೂಡಿಸುವ ಕಿರುಚಿತ್ರ 15ರಂದು ಬಿಡುಗಡೆ"
Be the first to comment on "ಬಂಟ್ವಾಳ ಯುವಕರಿಂದ ಜಾಗೃತಿ ಮೂಡಿಸುವ ಕಿರುಚಿತ್ರ 15ರಂದು ಬಿಡುಗಡೆ"