ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ: ನರಿಕೊಂಬು ಗ್ರಾಮದ ಬಿಕ್ರೋಡಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಜಿಪಂ ನಿಧಿಯ 7 ಲಕ್ಷ ರೂ.ವೆಚ್ಚದ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.ಜಿಪಂ ಸದಸ್ಯೆ ಕಮಾಲಾಕ್ಷಿ ಪೂಜಾರಿ ಅವರು ಶಿಲಾನ್ಯಾಸ ನೆರವೇರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಯು.ರಾಜೇಶ್ ನಾಯ್ಕ್ ಕುಡಿಯುವ ನೀರಿನ ವಿಚಾರದಲ್ಲಿ ಗ್ರಾಮವು ಸ್ವಾವಲಂಬಿ ಆಗಬೇಕಾಗಿದ್ದು, ಸರಕಾರದಿಂದ ಸಿಗುವ ಅನುದಾನವನ್ನು ಬಳಸಿಕೊಂಡು ಸೌಲಭ್ಯವನ್ನು ಅನುಷ್ಠಾನಕ್ಕೆ ತರುವುದು ಜನಪ್ರತಿನಿಗಳ ಕರ್ತವ್ಯವಾಗಿದೆ ಎಂದರು.
ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ನರಿಕೊಂಬು ಗ್ರಾಪಂ ಅಧ್ಯಕ್ಷ ಯಶೋಧರ ಕರ್ಬೆಟ್ಟು,ಸದಸ್ಯರಾದ ದಿವಾಕರ ಶಂಭೂರು,ಕಿಶೋರ್ ಶೆಟ್ಟಿ,ತ್ರಿವೇಣಿ ಕೇದಿಗೆ,ಮಾಧವ ಕರ್ಬೆಟ್ಟು,ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಮಾಜಿ ಸದಸ್ಯರಾದ ಗಣೇಶ್ ಕುಮಾರ್ ಅಂತರ,ಜಿನರಾಜ ಕೋಟ್ಯಾನ್ ,ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಪುರುಷೊಇತ್ತಮ ಎಸ್.,ಸ್ಥಳೀಯ ಪ್ರಮುಖರಾದ ಸದಾಶಿವ ಸಪಲ್ಯ,ಮೋಹನ ಭಂಡಾರಿ ಕಲ್ಯಾರು,ಸುರೇಶ್ ಕುಮಾರ್,ನಾರಾಯಣ ಪೂಜಾರಿ ದರ್ಖಾಸು,ಅಭಿವೃದ್ದಿ ಅಕಾರಿ ಶಿವಜನಕೊಂಡ,ಕೇದಿಗೆ ನಾರಾಯಣ ಪೂಜಾರಿ,ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಸ.ಕಾ.ನಿ.ಇಂಜಿನಿಯರ್ ರೋಹಿದಾಸ್ ,ಸ.ಇಂಜಿನಿಯರ್ ಕುಶ ಕುಮಾರ್ ಮೊದಲಾದವರಿದ್ದರು.
Be the first to comment on "ನರಿಕೊಂಬು: 7 ಲ.ರೂ. ವೆಚ್ಚದ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಿಲಾನ್ಯಾಸ"